Thirthahalli, Shimoga (Shivamogga) : ಎಳ್ಳಮಾವಾಸ್ಯೆ ಜಾತ್ರಾ ಮಹೋತ್ಸವದ (Ellamavasye Jathre Mahotsava) ಅಂಗವಾಗಿ ಭಾನುವಾರ ಬೆಳಗಿನ ಜಾವ ಭಕ್ತರು ಪುರಾಣ ಪ್ರಸಿದ್ಧ ರಾಮೇಶ್ವರ (Sri Rameshwara Temple) ದೇವರ ಉತ್ಸವ ಮೂರ್ತಿಗೆ ಪೂಜೆ ಹಾಗೂ ತುಂಗಾ ನದಿಯ ರಾಮಕೊಂಡದಲ್ಲಿ (Tunga River, Rama Konda, Thirthahalli) ಧಾರ್ಮಿಕ ಕಾರ್ಯಕ್ರಮದ ಮೂಲಕ ತೀರ್ಥಸ್ನಾನವನ್ನು ಆಚರಿಸಿದರು.
ಅನೇಕ ಭಕ್ತರು ಮುಂಜಾನೆಯಿಂದ ಬಂದು ಸ್ನಾನ ಮಾಡಿ ಪುನೀತರಾದರು. ಜಾತ್ರೆ ಪ್ರಯುಕ್ತ ಮೂರು ದಿನಗಳ ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪಕರು.
ಭೀಮನಕಟ್ಟೆ ಮಠದ ಶ್ರೀಗಳು, ಗೃಹ ಸಚಿವ ಆರಗ ಜ್ಞಾನೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಸದಸ್ಯರು, ದೇವಸ್ಥಾನ ಧಾರ್ಮಿಕ ಮಂಡಳಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ತೆಪ್ಪೋತ್ಸವ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ತಹಶೀಲ್ದಾರ್ ಡಾ.ಎಸ್.ಬಿ. ಶ್ರೀಪಾದ್ ಉಪಸ್ಥಿತರಿದ್ದರು.