Bngaluru: ನಗರದಲ್ಲಿ ಜನಸಂಖ್ಯೆ ಹಾಗೂ ಅಪರಾಧಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ, ಶಾಂತಿ-ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಮೂರು ಹೊಸ ಪೊಲೀಸ್ ಉಪ ವಿಭಾಗಗಳನ್ನು (police divisions) ಸ್ಥಾಪಿಸಲಾಗಿದೆ.
ಇದರೊಂದಿಗೆ ಇತ್ತೀಚೆಗೆ 8 ಉಪ ವಿಭಾಗಗಳಿದ್ದ ನಗರದಲ್ಲಿ ಈಗ ಒಟ್ಟು 11 ಪೊಲೀಸ್ ವಿಭಾಗಗಳು ಕಾರ್ಯನಿರ್ವಹಿಸಲಿವೆ. ಹೊಸದಾಗಿ ಸೇರ್ಪಡೆಯಾದ ವಿಭಾಗಗಳು.
- ವಾಯುವ್ಯ ವಿಭಾಗ
- ಎಲೆಕ್ಟ್ರಾನಿಕ್ ಸಿಟಿ ವಿಭಾಗ
- ನೈಋತ್ಯ ವಿಭಾಗ
ವಿಭಾಗಗಳ ವಿವರ
ವಾಯುವ್ಯ ವಿಭಾಗ: ಪೀಣ್ಯ, ರಾಜಗೋಪಾಲನಗರ, ಬಾಗಲಗುಂಟೆ, ಬ್ಯಾಡರಹಳ್ಳಿ, ಸೋಲದೇವನಹಳ್ಳಿ ಹಾಗೂ ಗಂಗಮ್ಮನಗುಡಿ ಠಾಣೆಗಳು ಈ ವಿಭಾಗಕ್ಕೆ ಸೇರ್ಪಡೆಯಾಗಿವೆ. ಡಿಸಿಪಿ: ಡಿ.ಎಲ್. ಚೇತನ್ (ಐಪಿಎಸ್).
ಎಲೆಕ್ಟ್ರಾನಿಕ್ ಸಿಟಿ ವಿಭಾಗ: ಈ ವಿಭಾಗಕ್ಕೆ ಎಂ. ನಾರಾಯಣ್ ಅವರನ್ನು ಮೊದಲ ಡಿಸಿಪಿಯಾಗಿ ನೇಮಿಸಲಾಗಿದೆ. ಈ ವಿಭಾಗಕ್ಕೆ ಹಿಂದಿನ ಆಗ್ನೇಯ ವಿಭಾಗದಿಂದ ಹಲವಾರು ಠಾಣೆಗಳು ಬಂದಿವೆ.
ನೈಋತ್ಯ ವಿಭಾಗ: ಪಶ್ಚಿಮ ಹಾಗೂ ದಕ್ಷಿಣ ವಿಭಾಗದ ಕೆಲವು ಠಾಣೆಗಳ ಪುನರ್ ಹಂಚಿಕೆಯಿಂದ ಈ ವಿಭಾಗ ರೂಪುಗೊಂಡಿದ್ದು, ಅನಿತಾ ಬಿ. ಹದ್ದಣ್ಣನವರ್ ಈ ವಿಭಾಗದ ಡಿಸಿಪಿಯಾಗಿದ್ದಾರೆ.
ಹೊಸ ವಿಭಾಗಗಳ ಮೂಲಕ, ಈಗಿನ ಠಾಣೆಗಳ ಮೇಲೆ ಇರುವ ಕೆಲಸದ ಒತ್ತಡ ಕಡಿಮೆಯಾಗಲಿದ್ದು, ಜನರಿಗೆ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪೊಲೀಸ್ ಸೇವೆ ಲಭಿಸಲು ಸಾಧ್ಯವಾಗಲಿದೆ.