Tirupati: TTD ಪ್ರಕಟಣೆ ಪ್ರಕಾರ, ತಿಮ್ಮಪ್ಪನ ವೈಕುಂಠ ದರ್ಶನಕ್ಕಾಗಿ ಜನವರಿ 10ರಿಂದ 12ರವರೆಗೆ ಸರ್ವ ದರ್ಶನ ಟೋಕನ್ ಗಳು ವಿತರಿಸಲ್ಪಡುವುದಾಗಿ ತಿಳಿಸಲಾಗಿದೆ. ಈ ಬಾರಿ ಹೆಚ್ಚಿನ ಜನರು ಪಾಲ್ಗೊಳ್ಳಲು ಮೊದಲ ಆದ್ಯತೆ ನೀಡಲಾಗಿದೆ ಎಂದು ಟಿಟಿಡಿ ಇಒ ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ತಿಳಿಸಿದ್ದಾರೆ.
ಸರ್ವದರ್ಶನ ಟಿಕೆಟ್ ಗಳನ್ನು ವಿತರಿಸಲು, ತಿರುಮಲದಲ್ಲಿ 4 ಕೌಂಟರ್ ಹಾಗೂ ತಿರುಪತಿ ನಗರದ 8 ಕೇಂದ್ರಗಳಲ್ಲಿ 87 ಕೌಂಟರ್ ಸೇರಿದಂತೆ ಒಟ್ಟು 91 ಕೌಂಟರ್ ಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 10, 11 ಮತ್ತು 12 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಗಳವರೆಗೆ 1.20 ಲಕ್ಷ ಟೋಕನ್ ಗಳನ್ನು ಬಿಡುಗಡೆ ಮಾಡಲಾಗುವುದು. ಉಳಿದ ದಿನಾಂಕಗಳ ಬಗ್ಗೆ ಒಂದೇ ದಿನ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಇಒ ಶ್ಯಾಮಲಾ ರಾವ್ ತಿಳಿಸಿದ್ದಾರೆ.
ಭಕ್ತರು ತಮ್ಮ ಆಧಾರ್ ಕಾರ್ಡ್ ಅನ್ನು ತೋರಿಸಿ ಸರ್ವದರ್ಶನ ಟೈಮ್ ಸ್ಲಾಟ್ ಟೋಕನನ್ನು ಪಡೆಯಬೇಕಾಗಿದೆ. ಟೋಕನ್ ಇಲ್ಲದ ಭಕ್ತರಿಗೆ ಈ ಹತ್ತು ದಿನಗಳಲ್ಲಿ ದರ್ಶನ ಪಡೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.