ಸಾಂಪ್ರದಾಯಿಕವಾಗಿ ಭಾರತದಲ್ಲಿ ಜನರು ಕಾರುಗಳನ್ನು (cars) ಆಯ್ಕೆ ಮಾಡುವಾಗ ಸುರಕ್ಷತೆಯನ್ನು ಹೆಚ್ಚು (maximum safety) ಗಮನಿಸುತ್ತಿರಲಿಲ್ಲ.
ಆದರೆ ಇತ್ತೀಚಿನ ವರ್ಷಗಳಲ್ಲಿ ಜನರು ಈ ಸಂಗತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಕಾರು (cars) ತಯಾರಕರು ಕೂಡ ತಮ್ಮ ಕಾರುಗಳಲ್ಲಿ ಗುಣಮಟ್ಟ ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು (Safest cars in india) ಹೆಚ್ಚಿಸುವತ್ತ ಮುಂದಾಗಿದ್ದಾರೆ.
ಟಾಪ್ 5 ಸುರಕ್ಷಿತ ಸೆಡಾನ್ ಕಾರುಗಳು
ಸ್ಕೋಡಾ ಸ್ಲಾವಿಯಾ: ಪ್ರಾರಂಭಿಕ ಬೆಲೆ: ₹10.69 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ.
6 ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮಲ್ಟಿ-ಕೊಲಿಷನ್ ಬ್ರೇಕಿಂಗ್, ABS ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಹಿಲ್-ಹೋಲ್ಡ್ ಕಂಟ್ರೋಲ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.
ಮಾರುತಿ ಸುಜುಕಿ ಡಿಜೈರ್: ಪ್ರಾರಂಭಿಕ ಬೆಲೆ: ₹6.79 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ.
6 ಏರ್‌ಬ್ಯಾಗ್‌ಗಳು, ABS ಇಬಿಡಿ, ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), 3-ಪಾಯಿಂಟ್ ಸೀಟ್ ಬೆಲ್ಟ್, ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಹೈಸ್ಪೀಡ್ ವಾರ್ನಿಂಗ್ ಹೊಂದಿದೆ.
ಹ್ಯುಂಡೈ ವರ್ನಾ: ಪ್ರಾರಂಭಿಕ ಬೆಲೆ: ₹11 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ. 6 ಏರ್‌ಬ್ಯಾಗ್‌ಗಳು, ESC, ಐಸೊಫಿಕ್ಸ್ ಮೌಂಟ್, ಸೀಟ್ ಬೆಲ್ಟ್ ರಿಮೈಂಡರ್ ಹೊಂದಿದೆ.
ಫೋಕ್ಸ್ ವ್ಯಾಗನ್ ವರ್ಟಸ್: ಪ್ರಾರಂಭಿಕ ಬೆಲೆ: ₹11.56 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ 5 ಸ್ಟಾರ್ ಪಡೆದುಕೊಂಡಿದೆ.
ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಕಂಟ್ರೋಲ್, ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್‌ಗಳನ್ನು ಹೊಂದಿದೆ.
ಟಾಟಾ ಟಿಗೋರ್: ಪ್ರಾರಂಭಿಕ ಬೆಲೆ: ₹6 ಲಕ್ಷ (ಎಕ್ಸ್ ಶೋರೂಂ) ಹೊಂದಿದ್ದು, Global NCAP ರೇಟಿಂಗ್ ವಯಸ್ಕರ ರಕ್ಷಣೆಗೆ 4 ಸ್ಟಾರ್ ಪಡೆದುಕೊಂಡಿದೆ, ಮಕ್ಕಳ ರಕ್ಷಣೆಗೆ 3 ಸ್ಟಾರ್ ಪಡೆದುಕೊಂಡಿದೆ. 2 ಏರ್‌ಬ್ಯಾಗ್‌ಗಳು, ಮೂಲಭೂತ ಸುರಕ್ಷತಾ ವೈಶಿಷ್ಟ್ಯಗಳು.
ಪರೀಕ್ಷೆಯನ್ನು 2020 ರಲ್ಲಿ ಮಾಡಲಾಗಿದ್ದು, ಸೆಡಾನ್ ಕೇವಲ ಎರಡು ಏರ್‌ಬ್ಯಾಗ್‌ಗಳನ್ನು ಒದಗಿಸುವ ಮೂಲಕ ಈ ಅಂಕಗಳನ್ನು ಸಾಧಿಸಿರುವುದು ವಿಶೇಷ. ಎಲ್ಲಾ ಕಾರುಗಳು ಅತಿ ಹೆಚ್ಚಿನ ಸುರಕ್ಷತಾ ಮಾನದಂಡಗಳನ್ನು ಹೊಂದಿವೆ.