ಕೆನಡಾದ ಪ್ರಸಿದ್ಧ ನಗರ ಟೊರೊಂಟೊದಲ್ಲಿ (Toronto) ಜೂನ್ 4ರಂದು ಭಯಾನಕ ಸಾಮೂಹಿಕ ಗುಂಡಿನ ದಾಳಿ ಸಂಭವಿಸಿದೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.
ಟೊರೊಂಟೊದ ಲಾರೆನ್ಸ್ ಹೈಟ್ಸ್ ಪ್ರದೇಶದಲ್ಲಿರುವ ಫ್ಲೆಮಿಂಗ್ಟನ್ ರಸ್ತೆ ಮತ್ತು ಜಕಾರಿ ಕೋರ್ಟ್ ಬಳಿ ರಾತ್ರಿ ಸುಮಾರು 8.40ರ ಸಮಯದಲ್ಲಿ ಈ ದಾಳಿ ನಡೆದಿದೆ. ಪೊಲೀಸರು ಸ್ಥಳಕ್ಕೆ ತಕ್ಷಣವೇ ಧಾವಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾದರೂ, ಜೀವಕ್ಕೆ ಅಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಇನ್ನೂ ಯಾವುದೇ ಶಂಕಿತರನ್ನು ಬಂಧಿಸಿಲ್ಲ, ದಾಳಿಕೋರನನ್ನು ಹುಡುಕುತ್ತಿದ್ದೇವೆ. ದಾಳಿಯ ಹಿಂದಿನ ಉದ್ದೇಶವೂ ಇನ್ನೂ ತಿಳಿದುಬಂದಿಲ್ಲ. ಆ ಪ್ರದೇಶದಲ್ಲಿ ಕಮಾಂಡ್ ಪೋಸ್ಟ್ ಅನ್ನು ಸ್ಥಾಪಿಸಲಾಗಿದೆ. ತನಿಖೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೊರೊಂಟೊ ಮೇಯರ್ ಅವರು ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ, “ಲಾರೆನ್ಸ್ ಹೈಟ್ಸ್ ದಾಳಿಯಿಂದ ನಾನು ಕಂಗಾಲಾಗಿದ್ದೇನೆ. ನನ್ನ ಕಚೇರಿ ಈಗಾಗಲೇ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ” ಎಂದು ತಿಳಿಸಿದ್ದಾರೆ.
ಪೊಲೀಸರು ತನಿಖೆ ಮುಂದುವರಿಸುತ್ತಿದ್ದು, ಸ್ಥಳದಲ್ಲಿ ತಾತ್ಕಾಲಿಕ ಕಮಾಂಡ್ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ.