
Lucknow: ಬಹುಜನ ಸಮಾಜವಾದಿ ಪಕ್ಷ (BSP) ಮುಖ್ಯಸ್ಥೆ ಮಾಯಾವತಿ ತಮ್ಮ ಸೋದರಳಿಯ ಆಕಾಶ್ ಆನಂದ್ (Akash Anand) ಅವರನ್ನು ಮತ್ತೆ ಪಕ್ಷದಿಂದ ಹೊರಹಾಕಿದ್ದಾರೆ. ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣ ಅವರ ಮಾವ ಅಶೋಕ್ ಸಿದ್ಧಾರ್ಥ್ ಅವರ ಪ್ರಭಾವ ಎಂದು ತಿಳಿಯಲಾಗಿದೆ.
ಮಾಯಾವತಿ ತಮ್ಮ ಎಕ್ಸ್ ಪೋಸ್ಟ್ ಮೂಲಕ ಇದನ್ನು ದೃಢಪಡಿಸಿದ್ದು, ಪಕ್ಷದ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಅಶೋಕ್ ಸಿದ್ಧಾರ್ಥ್ ಅವರನ್ನು ಕೆಲ ದಿನಗಳ ಹಿಂದೆ ಪಕ್ಷದಿಂದ ಹೊರಹಾಕಲಾಗಿತ್ತು.
ಆಕಾಶ್ ಆನಂದ್ ಪಕ್ಷದ ಹಿತಾಸಕ್ತಿಗಿಂತ ತಮ್ಮ ಮಾವನ ಪ್ರಭಾವಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆ ಮಾಡಲಾಗಿದೆ. ಮಾರ್ಚ್ 2 ರಂದು ಲಕ್ನೋದಲ್ಲಿ ನಡೆದ ಸಭೆಯಲ್ಲಿ, ಈ ನಿರ್ಧಾರವನ್ನು ಪುನರುಚ್ಚರಿಸಿ ಮಾಯಾವತಿ ಅಧಿಕೃತವಾಗಿ ಘೋಷಿಸಿದರು.
ಇದೀಗ, BSP ಬಾಗಿಲುಗಳು ಆನಂದ್ ಅವರಿಗೆ ಪೂರ್ಣವಾಗಿ ಮುಚ್ಚಿದಂತಿದೆ.