ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ಪ್ರಮುಖ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಗ್ಲಾನ್ಜಾ, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಕ್ರಾಸ್, ರೂಮಿಯಾನ್ ಮತ್ತು ಫಾರ್ಚುನರ್ (Glanza, Innova Crysta, Innova Hicross, Rumion and Fortuner) ಸೇರಿದಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯ ‘Urban Cruiser Hyryder’ ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದ್ದು, ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.
ಟೊಯೊಟಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಕ್ಟೋಬರ್ 1ರ ಪ್ರಕಾರ, ಅರ್ಬನ್ ಕ್ರೂಸರ್ ಹೈರಿಡರ್ (Urban Cruiser Hyryder) ಎಸ್‌ಯುವಿ ಹೊಂದಿರುವ ಕಾಯುವಿಕೆ ಅವಧಿ (Waiting Period) ಕುರಿತ ವಿವರಗಳನ್ನು ಹಂಚಿಕೊಂಡಿದೆ.
ಈ ಕಾರಿನ ಹೈಬ್ರಿಡ್, ಪೆಟ್ರೋಲ್ (ನಿಯೋ ಡ್ರೈವ್) ಹಾಗೂ ಸಿಎನ್‌ಜಿ ರೂಪಾಂತರಗಳು (ವೇರಿಯೆಂಟ್), ಬುಕ್ಕಿಂಗ್ ಮಾಡಿದ 1 ರಿಂದ 2 ತಿಂಗಳ ಬಳಿಕ ವಿತರಣೆಯಾಗಲಿವೆ.
ಸದ್ಯ ಹೊಚ್ಚ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಕಾರು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೂ.11.14 ರಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.
ಇ, ಎಸ್, ಜಿ ಸೇರಿದಂತೆ ಹಲವು ರೂಪಾಂತರಗಳನ್ನು ಹೊಂದಿದೆ. ಕೆಫೆ ವೈಟ್, ಗೇಮಿಂಗ್ ಗ್ರೇ ಮತ್ತು ಸ್ಪೋರ್ಟಿನ್ ರೆಡ್ ಒಳಗೊಂಡಂತೆ ವಿವಿಧ ಬಣ್ಣಗಳೊಂದಿಗೂ ಸಿಗುತ್ತದೆ.
ಈ ಕಾರು, 1.5-ಲೀಟರ್ ಪೆಟ್ರೋಲ್ (Neo Drive), ಹೈಬ್ರಿಡ್ (Petrol + Electric) ಮತ್ತು CNG ಎಂಜಿನ್‌ನ್ನು ಒಳಗೊಂಡಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿಯೂ ದೊರೆಯಲಿದ್ದು, 19.39 ರಿಂದ 27.97 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಈ ಕಾರು ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಕನೆಕ್ಟೆಡ್ ಕಾರ್ ಟೆಕ್, ಆಂಬಿಯೆಂಟ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌ಗಳು, ಹೆಡ್ಸ್ ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳನ್ನು ಪಡೆದಿದೆ.
ಹೊಸ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಯರ ರಕ್ಷಣೆಗಾಗಿ 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿವಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಆಲ್ ವೀಲ್ ಡಿಸ್ಕ್ ಬೈಕ್‌ಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ, ನೂತನ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಸಾಕಷ್ಟು ಅತ್ಯಾಕರ್ಷಕವಾಗಿರುವುದರಿಂದ ಬಹುತೇಕರ ಆಯ್ಕೆಯ ವಾಹನವಾಗಿದೆ ಎಂದು ಹೇಳಬಹುದು.
ಇದರಿಂದ ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ನೀವು ದೀಪಾವಳಿ ಹಬ್ಬಕ್ಕೆ ಈ ಕಾರನ್ನು ಬುಕ್ಕಿಂಗ್ ಮಾಡಿದರೆ ಹೊಸ ವರ್ಷದೊಳಗೆ ವಿತರಣೆಯಾಗಿ ಬಿಡುತ್ತದೆ.