Bagepalli : ಬಾಗೇಪಲ್ಲಿ ನಗರದ CPM ಕಚೇರಿಯಲ್ಲಿ ಶುಕ್ರವಾರ ದಿವಂಗತ CPM ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಗೆ (Sitaram Yechury Tribute) ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜು ಮಾತನಾಡಿ “‘ಇಂಡಿಯಾ ಕೂಟಕ್ಕೆ ಮುಂಚೂಣಿ ನಾಯಕರಾಗಿದ್ದ ಸೀತಾರಾಂ ಯೆಚೂರಿ ಅವರು ಜಾತಿ ವ್ಯವಸ್ಥೆ, ಉದಾರಿಕರಣ, ಖಾಸಗಿಕರಣ, ಕೇಸರಿಕರಣದ ಹಾಗೂ ಜನವಿರೋಧಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸದಾ ಧ್ವನಿ ಎತ್ತಿ ಕಮ್ಯೂನಿಸ್ಟರಿಗೆ ಅಲ್ಲದೇ ಜಾತ್ಯಾತೀತ, ಬಿಜೆಪಿಯೇತರ, ಕಾಂಗ್ರೆಸ್ ಸೇರಿದಂತೆ ವಿವಿಧ ಜನಪರ ಸಂಘಟನೆಗಳಿಗೆ ಮಾರ್ಗದರ್ಶಕರಾಗಿದ್ದರು. ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ, ಸಂಶೋಧನಾ ವಿದ್ಯಾರ್ಥಿಯಾಗಿದ್ದ ಯೆಚೂರಿ ಜೆಎನ್‌ಯು ಚುನಾವಣೆಯಲ್ಲಿ ಎಸ್‌ಎಫ್‌ಐನ ವಿದ್ಯಾರ್ಥಿ ಸಂಘಟನೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಕಿರಿಯ ವಯಸ್ಸಿನಲ್ಲಿ ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯರಾಗಿದ್ದರು” ಎಂದು ಸ್ಮರಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಸಿಪಿಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಜಿಲ್ಲಾ ಸಮಿತಿ ಸದಸ್ಯ ಸಿದ್ದಗಂಗಪ್ಪ, ಬಿಳ್ಳೂರು ನಾಗರಾಜ್, ಬಿ.ಸಾವಿತ್ರಮ್ಮ, ನಗರ ಸಮಿತಿ ಕಾರ್ಯದರ್ಶಿ ವಾಲ್ಮೀಕಿ ಅಶ್ವಥ್ಥಪ್ಪ, ಮುಖಂಡ ಚನ್ನರಾಯಪ್ಪ, ಚಂಚುರಾಯನ ಪಲ್ಲಿಕೃಷ್ಣಪ್ಪ, ಬಿ.ಎಚ್.ರಫೀಕ್, ಜಿ.ಮುಸ್ತಾಫ, ಜಿ.ಕೃಷ್ಣಪ್ಪ, ಗೊಲ್ಲಪಲ್ಲಿ ಮಂಜುನಾಥ್, ಜಹೀರ್ ಬೇಗ್, ರಮೇಶ, ರಶೀದ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಸೀತಾರಾಂ ಯೆಚೂರಿಗೆ ಶ್ರದ್ಧಾಂಜಲಿ ಸಭೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.