Home Karnataka Chikkaballapura ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

Gauribidanur : ಗೌರಿಬಿದನೂರು ನಗರಸಭೆಯಲ್ಲಿ ನೂತನ ನಗರಸಭೆ ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣಪ್ಪ ಮತ್ತು ಉಪಾಧ್ಯಕ್ಷರಾಗಿ ಪರೀದ್ ಅಧಿಕಾರ ಸ್ವೀಕಾರ (CMC President assumed office) ಸಮಾರಂಭವನ್ನು ಶುಕ್ರವಾರ ನಡೆಸಲಾಯಿತು.

ಅಧಿಕಾರ ಸ್ವೀಕಾರದ ನಂತರ ಮಾತನಾಡಿದ ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ “ಶಾಸಕ ಪುಟ್ಟಸ್ವಾಮಿಗೌಡರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತೇನೆ. ಸರ್ಕಾರದಿಂದ ಬರುವ ಸವಲತ್ತು ಯೋಜನೆಗಳನ್ನು ಅರ್ಹ ಫಲನುಭವಿಗಳಿಗೆ ತಲುಪಿಸಲು ಪ್ರಯತ್ನ ಮಾಡುತ್ತೇನೆ. ನಗರದ 31 ವಾರ್ಡ್‌ಗಳ ಸದಸ್ಯರ ಸಹಕಾರದೊಂದಿಗೆ ಅಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು” ಎಂದರು.

ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಡಿ.ಎಂ.ಗೀತಾ, ಕೆಎಚ್‌ಪಿ ಪೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಶ್ರೀನಿವಾಸಗೌಡ, ನಗರ ಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ, ನಗರಸಭೆ ಸದಸ್ಯ ರೂಪ ಅನಂತರಾಜು, ಶಭಾನ ಅಸ್ಲಂ, ಮಾರ್ಕೆಟ್ ಮೋಹನ್, ಪುಣ್ಯವತಿ ಜಯಣ್ಣ, ಮಂಜುಳ, ಸಪ್ತಗಿರಿ, ರಾಜಕುಮಾರ್ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

The post ನಗರಸಭೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version