Washington DC, USA : ಅಮೆರಿಕರ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಜ್ಯೋತಿಯನ್ನು ಬೆಳಗಿಸಿದ ಅಧ್ಯಕ್ಷ ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ದೀಪಾವಳಿಯ ಶುಭಾಶಯಗಳನ್ನು ಭಾರತೀಯ ಸಮುದಾಯಕ್ಕೆ ಹೇಳಿದರು. “ನಾನು ಪ್ರಧಾನಿ ಮೋದಿಯವರನ್ನು ದಿನವೂ ಮಾತನಾಡುತ್ತೇನೆ, ಇಂದು ಕೂಡ ಮಾತುಕತೆ ಮಾಡಿದ್ದೇವೆ. ವಾಣಿಜ್ಯ ಮತ್ತು ಶಾಂತಿಯ ಬಗ್ಗೆ ಚರ್ಚೆಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಬೇಡ ಎಂದು ಒಟ್ಟಿಗೆ ನಿರ್ಧರಿಸಿದ್ದೇವೆ,” ಎಂದರು.
ದೀಪವೇ ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಜ್ಞಾನದ ಮೇಲೆ ಜ್ಞಾನದ ಜಯ ಎಂದು ಅವರು ಹಬ್ಬದ ಮಹತ್ವವನ್ನೂ ವಿವರಿಸಿದರು. “ಮೋದಿ ಸೂಪರ್ ಲೀಡರ್, ಒಳ್ಳೆಯ ಸ್ನೇಹಿತ. ಭಾರತ-ಅಮೆರಿಕ ಸಂಬಂಧಗಳು ಇನ್ನಷ್ಟು ಬಲವಾಗಿವೆ,” ಎಂದು ಹೇಳಿದರು.
ಚೀನಾದ ಮೇಲೆ ಉನ್ನತ ಸುಂಕ ವಿಧಿಸಲಾಗುತ್ತದೆ ಎಂದರು. ದೇಶದ ಸುರಕ್ಷತೆಗಾಗಿ ಜಾಗರೂಕ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ಅವರು ಅಧ್ಯಕ್ಷ ಟ್ರಂಪ್‌ಗೆ ಅಭಿನಂದನೆ ಸಲ್ಲಿಸಿದರು. ದೀಪಾವಳಿಯ ಸಂಧರ್ಭದಲ್ಲಿ ಹಬ್ಬದ ಬೆಳಕು ಅಮೆರಿಕ ಮತ್ತು ಭಾರತದ ಸಂಬಂಧಕ್ಕೆ ಮತ್ತಷ್ಟು ಶಕ್ತಿಯನ್ನು ಕೊಡಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ನಿಮ್ಮ ದೀಪಾವಳಿ ಶುಭಾಶಯಗಳಿಗೆ ಧನ್ಯವಾದಗಳು. ಭಾರತ ಹಾಗೂ ಅಮೆರಿಕ ಹೀಗೆಯೇ ಭರವಸೆಯಿಂದ ಮುಂದುವರೆಯಲಿ, ಭಯೋತ್ಪಾದನೆಗೆ ಒಟ್ಟಾಗಿ ತಿರುಗುಬಾನಾಗಲಿ,” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.







