back to top
25.7 C
Bengaluru
Sunday, December 14, 2025
HomeNewsಅಲಾಸ್ಕಾದಲ್ಲಿ Trump-Putin ಐತಿಹಾಸಿಕ ಭೇಟಿ

ಅಲಾಸ್ಕಾದಲ್ಲಿ Trump-Putin ಐತಿಹಾಸಿಕ ಭೇಟಿ

- Advertisement -
- Advertisement -

Alaska: ರಷ್ಯಾ–ಉಕ್ರೇನ್ ಯುದ್ಧ ನಿಲ್ಲಿಸಲು ಅಮೆರಿಕ ಮತ್ತು ರಷ್ಯಾ ನಡುವೆ ಅಲಾಸ್ಕಾದಲ್ಲಿ ಮಹತ್ವದ ಮಾತುಕತೆ ನಡೆಯಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನಾ ನೆಲೆಯಲ್ಲಿ ಭೇಟಿಯಾಗಿ ಕೈಕುಲುಕಿದರು. ಬಳಿಕ ಇಬ್ಬರೂ ಅಮೆರಿಕ ಅಧ್ಯಕ್ಷರ ‘ಬೀಸ್ಟ್’ ಕಾರಿನಲ್ಲಿ ಒಂದೇ ಕಾರಿನಲ್ಲಿ ಕುಳಿತು ಮಾತುಕತೆ ಸ್ಥಳಕ್ಕೆ ತೆರಳಿದರು.

ರಷ್ಯಾದ ಬೇಡಿಕೆಗಳು

  • ಉಕ್ರೇನ್ ನ್ಯಾಟೋಗೆ ಸೇರಬಾರದು
  • ಪಾಶ್ಚಿಮಾತ್ಯ ದೇಶಗಳ ನೆರವು (ಹಣಕಾಸು, ಶಸ್ತ್ರಾಸ್ತ್ರ) ನಿಲ್ಲಬೇಕುಉಕ್ರೇನ್ ತನ್ನ ಕೆಲವು ಪ್ರದೇಶಗಳನ್ನು ರಷ್ಯಾಗೆ ಒಪ್ಪಿಸಬೇಕು
  • ಉಕ್ರೇನ್ ನಲ್ಲಿ ನಾಯಕತ್ವ ಬದಲಾಗಬೇಕು

ಸುಮಾರು ಮೂರು ಗಂಟೆಗಳ ಮಾತುಕತೆ ಬಳಿಕ ಟ್ರಂಪ್ ಮತ್ತು ಪುಟಿನ್ “ಪ್ರಗತಿ ಸಾಧನೆ ನಡೆದಿದೆ” ಎಂದು ಘೋಷಿಸಿದರು. ಆದರೆ ಸ್ಪಷ್ಟ ಒಪ್ಪಂದದ ವಿವರಗಳನ್ನು ಇಬ್ಬರೂ ಬಹಿರಂಗಪಡಿಸಲಿಲ್ಲ.

“ಯುದ್ಧ ನಿಲ್ಲಿಸಬೇಕಾಗಿದೆ. ಒಪ್ಪಂದಕ್ಕೆ ತಲುಪಲು ಉತ್ತಮ ಅವಕಾಶವಿದೆ. NATO ಹಾಗೂ ಉಕ್ರೇನ್ ನಾಯಕ ಝೆಲೆನ್ಸ್ಕಿಗೆ ನಾನು ಸಭೆಯ ವಿವರ ನೀಡುತ್ತೇನೆ” ಎಂದು ಟ್ರಂಪ್ ಹೇಳಿದರು.

“ರಷ್ಯಾ–ಉಕ್ರೇನ್ ಒಂದೇ ಬೇರುಗಳನ್ನು ಹೊಂದಿವೆ. ಈಗ ನಡೆಯುತ್ತಿರುವ ಯುದ್ಧ ನಮಗೆ ದುಃಖಕರ. ಅದನ್ನು ಕೊನೆಗೊಳಿಸಲು ನಾವು ಸಿದ್ಧ” ಎಂದು ಪುಟಿನ್ ಹೇಳಿದರು.

ಕದನ ವಿರಾಮ ಘೋಷಣೆ ಆಗಲಿದೆಯೇ?, ರಷ್ಯಾದ ಬೇಡಿಕೆಗಳಿಗೆ ಅಮೆರಿಕ ಹಾಗೂ ಉಕ್ರೇನ್ ಒಪ್ಪುತ್ತವೆಯೇ? ಈ ಪ್ರಶ್ನೆಗಳು ಇನ್ನೂ ಉತ್ತರಿಸದೇ ಉಳಿದಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page