
Washington: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಹೊಸ ತೆರಿಗೆ ನೀತಿ ರೂಪಿಸಲು ಸಜ್ಜಾಗಿದ್ದಾರೆ. ಇದು ಒಂದೇ ಸಮಯದಲ್ಲಿ ಅಮೆರಿಕದ ಅಭಿವೃದ್ಧಿಗೆ ಉತ್ತೇಜನ ನೀಡುವುದರ ಜೊತೆಗೆ ಭಾರತ ಮತ್ತು ಚೀನಾದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಟ್ರಂಪ್ ಪ್ರಕಾರ, 19ನೇ ಶತಮಾನದ ಕೊನೆ ಮತ್ತು 20ನೇ ಶತಮಾನದ ಆರಂಭದಲ್ಲಿ ಅಮೆರಿಕದ ಆರ್ಥಿಕತೆ ಚೆನ್ನಾಗಿ ಬೆಳೆಯಲು ಆಮದು ಸುಂಕ ಮುಖ್ಯ ಪಾತ್ರ ವಹಿಸಿತು. ಈ ನಿಟ್ಟಿನಲ್ಲಿ, ಅವರು ಆದಾಯ ತೆರಿಗೆಯನ್ನು ಕಡಿಮೆ ಮಾಡಿ, ವಿದೇಶಿ ಸರಕುಗಳ ಮೇಲೆ ತೆರಿಗೆ ಹೆಚ್ಚಿಸಲು ಯೋಜಿಸುತ್ತಿದ್ದಾರೆ.
ಚೀನಾ ಉತ್ಪನ್ನಗಳ ಮೇಲೆ ಪ್ರಭಾವ: ಅಮೆರಿಕ ಚೀನಾದ ದೊಡ್ಡ ಮಾರುಕಟ್ಟೆ ಆಗಿರುವುದರಿಂದ, ತೆರಿಗೆ ಹೆಚ್ಚಳ ಚೀನಾದ ವಾಣಿಜ್ಯಕ್ಕೆ ಒತ್ತಡ ತರುತ್ತದೆ.
ಭಾರತದ ಉದ್ಯಮಗಳಿಗೆ ಸವಾಲು: ಆದಾಯ ತೆರಿಗೆ ಕಡಿಮೆಯಿಂದ ಅಮೆರಿಕ ಉದ್ಯಮಿಗಳಿಗೂ ಲಾಭ, ಆದರೆ ಇದು ಭಾರತದ ಉದ್ಯಮಗಳಿಗೆ ಹೊಡೆತ. ಉನ್ನತ ಆದಾಯದ ಉದ್ಯಮಿಗಳು ಮತ್ತು ತಾಂತ್ರಿಕ ನಿಪುಣರು ಅಮೆರಿಕಕ್ಕೆ ವಲಸೆ ಹೋಗಬಹುದು.
ಟ್ರಂಪ್ ಅವರ ಹೊಸ ನೀತಿಯ ಪರಿಣಾಮವಾಗಿ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಬಹುದು, ಬಡ್ಡಿದರ ಏರಬಹುದು ಎಂದು ಕೆಲ ಆರ್ಥಿಕತಜ್ಞರು ಎಚ್ಚರಿಸಿದ್ದಾರೆ. ಈ ಕ್ರಮಗಳನ್ನು ಜಾರಿಗೆ ತರಲು ತಾಂತ್ರಿಕ ಮತ್ತು ಕಾನೂನು ಅಡಚಣೆಗಳೂ ಎದುರಾಗಬಹುದು.
ಟ್ರಂಪ್ ಅವರ ಈ ನಿರ್ಧಾರ ಅಮೆರಿಕದ ಆರ್ಥಿಕತೆಗೆ ಉಲ್ಲಾಸ ತರುತ್ತದೆಯಾ ಅಥವಾ ಪ್ರಬಲ ಆರ್ಥಿಕ ರಾಷ್ಟ್ರಗಳಿಗೆ ಹೊಸ ತಲೆನೋವಾಗಿ ಪರಿಣಮಿಸುತ್ತದೆಯಾ ಎಂಬುದನ್ನು ಮುನ್ನೋಟದಲ್ಲಿ ನಿರ್ಧರಿಸಲಾಗದು.