Washington: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಅವರು, “ನಾವು ಭಾರತದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೇವೆ. ಆದರೆ ನಮ್ಮ ಆರ್ಥಿಕ ಸಂಬಂಧ ಏಕಪಕ್ಷೀಯವಾಗಿದೆ” ಎಂದು ಹೇಳಿದ್ದಾರೆ.
ಟ್ರಂಪ್ ಹೇಳುವಂತೆ, ಭಾರತವು ವಿಶ್ವದಲ್ಲೇ ಹೆಚ್ಚು ಆಮದು ಸುಂಕಗಳನ್ನು ವಿಧಿಸುತ್ತಿದೆ. ಇದರಿಂದ ಅಮೆರಿಕ ಭಾರತಕ್ಕೆ ಕಡಿಮೆ ರಫ್ತು ಮಾಡುತ್ತಿದೆ, ಆದರೆ ಭಾರತ ಅಮೆರಿಕಕ್ಕೆ ಹೆಚ್ಚು ರಫ್ತು ಮಾಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತದಲ್ಲಿ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಮೇಲೆ 200% ಆಮದು ಸುಂಕ ಹೇರಲಾಗಿದೆ. ಇದರಿಂದ ಕಂಪನಿಗೆ ಭಾರತದಲ್ಲಿ ನೇರವಾಗಿ ಕಾರ್ಖಾನೆ ಸ್ಥಾಪಿಸಬೇಕಾಯಿತು.
ಟ್ರಂಪ್ ಪ್ರಕಾರ, ಅನ್ಯಾಯದ ಸುಂಕಗಳಿಂದಾಗಿ ಅನೇಕ ಕಂಪನಿಗಳು ಅಮೆರಿಕಕ್ಕೆ ವಾಪಸ್ ಬರುತ್ತಿವೆ. ವಿಶೇಷವಾಗಿ ಕಾರು ಕಂಪನಿಗಳು ಮತ್ತು ತಂತ್ರಜ್ಞಾನ ಕಂಪನಿಗಳು ಚೀನಾ, ಮೆಕ್ಸಿಕೊ ಮತ್ತು ಕೆನಡಾದಿಂದ ಅಮೆರಿಕಕ್ಕೆ ಬರುವುದಾಗಿ ಹೇಳಿದ್ದಾರೆ.
ಟ್ರಂಪ್ ಅವರು, “ಅಮೆರಿಕ ಸುಂಕ ವಿಧಿಸಿದ ಬಳಿಕ ಭಾರತ ತನ್ನ ಸುಂಕಗಳನ್ನು ಶೂನ್ಯಕ್ಕೆ ಇಳಿಸಲು ಬಯಸುತ್ತಿದೆ. ಆದರೆ ಈಗ ಕಾಲ ಮೀರಿದೆ” ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲೂ ಅವರು ಭಾರತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಮತ್ತು ರಕ್ಷಣಾ ಉಪಕರಣಗಳಿಗೆ ರಷ್ಯಾದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಟೀಕಿಸಿದ್ದಾರೆ. “ಭಾರತ ನಮ್ಮ ಅತಿದೊಡ್ಡ ಕ್ಲೈಂಟ್, ಆದರೆ ವ್ಯವಹಾರ ಏಕಪಕ್ಷೀಯವಾಗಿದೆ” ಎಂದಿದ್ದಾರೆ.
ಟ್ರಂಪ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ, “ಭಾರತ ದೇಶದ ಹಿತಾಸಕ್ತಿ ಬಿಟ್ಟುಕೊಡುವುದಿಲ್ಲ. ರೈತರು, ಸಣ್ಣ ಕೈಗಾರಿಕೆಗಳು ಮತ್ತು ಪಶುಸಂಗೋಪಕರ ಹಿತಾಸಕ್ತಿಗೆ ಯಾವ ಸಂದರ್ಭದಲ್ಲೂ ರಾಜಿ ಇಲ್ಲ” ಎಂದು ಹೇಳಿದ್ದಾರೆ.