Chikkanayakanahalli, Tumakuru : ಚಿಕ್ಕನಾಯಕನಹಳ್ಳಿ ಪಟ್ಟಣದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಈಚೆಗೆ ರಾಜ್ಯ ಆಹಾರ ಮಾರಾಟ ಮಹಾಮಂಡಳ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಬೆಂಬಲ ಬೆಲೆಗೆ (MSP) ರೈತರಿಂದ ರಾಗಿ (Ragi) ಖರೀದಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ (J. C. Madhu Swamy) ಉದ್ಘಾಟಿಸಿದರು.
ರೈತರು ಕಳಪೆ ರಾಗಿ ಮಾರಾಟಕ್ಕೆ ಮುಂದಾಗಬಾರದು, ಈಗಾಗಲೇ ಸತತ ಮಳೆಯಿಂದ ರಾಗಿ ಸಾಕಷ್ಟು ಹಾಳಾಗಿದೆ. ರೈತರು ರಾಗಿ ಗುಣಮಟ್ಟವನ್ನು ಕಾಪಾಡಿ ಸ್ವಚ್ಛಗೊಳಿಸಿದ ರಾಗಿಯನ್ನೇ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ತಹಶೀಲ್ದಾರ್ ಬಿ.ತೇಜಸ್ವಿನಿ, ಆಹಾರ ಇಲಾಖೆಯ ಪ್ರಜ್ವಲ್ ಉಪಸ್ಥಿತರಿದ್ದರು.