Tumkur, Tumakuru : ಪಾವಗಡದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ (Pavagada Kote Anjaneya Swamy Temple) ಬಳಿ ಸೋಮವಾರ ಶ್ರೀರಾಮಸೇನೆ ಪದಾಧಿಕಾರಿಗಳು ಆಜಾನ್‌ಗೆ (Azaan) ಪ್ರತಿಯಾಗಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ (Hanuman Chalisa) ಪಠಿಸಿದರು. ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತೆಯಾಗಿ ದೇಗುಲದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಶ್ರೀರಾಮಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಕಾವಲಗೆರೆ ರಾಮಾಂಜಿ ಮಾತನಾಡಿ “ಸುಪ್ರೀಂ ಕೋರ್ಟ್ ಆದೇಶವನ್ನು ಮಸೀದಿಗಳಲ್ಲಿ ಪಾಲಿಸುವವರೆಗೂ ಬೆಳಿಗ್ಗೆ ಹಾಗೂ ರಾತ್ರಿ ಹನುಮಾನ್ ಚಾಲೀಸಾ ಪಠಿಸಲಾಗುವುದು. ಕಾನೂನು ಉಲಂಘಿಸಿದರೆ ಮುಂದಿನ ದಿನಗಳಲ್ಲಿ ಇಡೀ ತಾಲ್ಲೂಕಿನಾದ್ಯಂತ ಚಾಲೀಸಾ ಪಠಣವನ್ನು ವಿಸ್ತರಿಸಲಾಗುವುದು’ ಎಂದು ಹೇಳಿದರು.
ಶ್ರೀರಾಮಸೇನೆ ಪದಾಧಿಕಾರಿಗಳಾದ ಶೇಖರ್ ಬಾಬು, ಅಲಕುಂದಿ ರಾಜ್, ರಾಘವೇಂದ್ರ ಮತ್ತು ರಾಷ್ಟ್ರೀಯ ಹಿಂದೂ ಪರಿಷತ್ ಪದಾಧಿಕಾರಿಗಳಾದ ಅನಿಲ್ ಯಾದವ್, ಪ್ರವೀಣ್, ಬಜರಂಗದಳದ ರಾಕೇಶ್, ವಾಸು, ನರೇಶ್ ಉಪಸ್ಥಿತರಿದ್ದರು.