Tumkur (Tumakuru) : ತುಮಕೂರಿನ ಪ್ರಸಿದ್ದ ಸಿದ್ಧಗಂಗಾ ಮಠದಲ್ಲಿ (Shree Siddaganga Math) ಮಹಾಶಿವರಾತ್ರಿ ಆಚರಣೆಯ ಮರು ದಿನ ಬುಧವಾರ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ (Siddalingeshwara Swamy Rathotsava) ವಿಜೃಂಭಣೆಯಿಂದ ನಡೆಯಿತು. Covid-19 ಮೂರನೇ ಅಲೆ ತಗ್ಗಿದ್ದರಿಂದ ರಥೋತ್ಸವ, ಜಾತ್ರೆ ನಡೆಸಲು ಜಿಲ್ಲಾ ಆಡಳಿತ ಅವಕಾಶ ನೀಡದ್ದರಿಂದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಸಿದ್ಧಲಿಂಗೇಶ್ವರ ಸ್ವಾಮಿಯನ್ನು ಅಟವಿ ಸ್ವಾಮೀಜಿ ಗದ್ದುಗೆಗೆ ತಂದು ಪೂಜೆ ಸಲ್ಲಿಸಿ, ನಂತರ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯಲ್ಲಿ ರಥದ ಬಳಿಗೆ ತರಲಾಯಿತು. ರಥದ ಸುತ್ತ ಪ್ರದಕ್ಷಿಣೆ ಹಾಕಿ, ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಾಜೋಪಚಾರ ಪೂರ್ಣಗೊಂಡ ನಂತರ 11.50 ಗಂಟೆಗೆ ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಸಿದ್ಧಲಿಂಗೇಶ್ವರ ಸ್ವಾಮೀಜಿ ರಥದ ಗಾಲಿಗೆ ಕಾಯಿ ಹೊಡೆದು ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಬೇಡಿಕೊಂಡು ರಥಕ್ಕೆ ದವನ, ಹೂವು, ಬಾಳೆ ಹಣ್ಣು ಎಸೆದು ನಮಿಸಿದರು.