ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಘೋಷಿಸಿರುವಂತೆ, ಇನ್ಮುಂದೆ ಹೊಸ two-wheeler ಖರೀದಿಸಿದಾಗ ಎರಡು ಹೆಲ್ಮೆಟ್ ಗಳು (Helmet) ಉಚಿತವಾಗಿ ಲಭ್ಯವಿರುತ್ತವೆ.
ಪ್ರತಿ ವರ್ಷ ಅಪಘಾತಗಳಲ್ಲಿ ಸಾವಿರಾರು ಜೀವಗಳು ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಪ್ರತಿಯೊಂದು ಹೊಸ ಸ್ಕೂಟರ್ ಅಥವಾ ಬೈಕ್ ಗೆ ಐಎಸ್ಐ ಪ್ರಮಾಣಿತ ಎರಡು ಹೆಲ್ಮೆಟ್ ಗಳು ಕಡ್ಡಾಯವಾಗಿ ಲಭ್ಯವಿರುತ್ತವೆ.
ಹೆಲ್ಮೆಟ್ ಮಹತ್ವ
- ಸರಿಯಾದ ಹೆಲ್ಮೆಟ್ ಧರಿಸುವುದು ತಲೆಗೆ ಗಾಯಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
- ಫುಲ್ ಫೇಸ್ ಹೆಲ್ಮೆಟ್ ಹೆಚ್ಚಿನ ರಕ್ಷಣೆ ಒದಗಿಸುತ್ತದೆ.
- ಒಪನ್ ಫೇಸ್ ಹೆಲ್ಮೆಟ್ ಹೆಚ್ಚು ಆರಾಮದಾಯಕ ಆದರೆ ಕಡಿಮೆ ರಕ್ಷಣೆ.
- ಹೆಲ್ಮೆಟ್ ಖರೀದಿಸುವಾಗ ಗುಣಮಟ್ಟ ಮತ್ತು ಸರಿಯಾದ ಗಾತ್ರ ಗಮನಿಸಬೇಕು.
ಈ ಹೊಸ ನೀತಿಯು ರಸ್ತೆ ಅಪಘಾತಗಳ ತಡೆಗಟ್ಟಲು ಮಹತ್ವದ ಹೆಜ್ಜೆಯಾಗಲಿದೆ. ಹೆಲ್ಮೆಟ್ ಧರಿಸಿ, ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿರಿ!