Ujjini, Kotturu, Vijayanagara district: ಸದ್ಧರ್ಮ ಪೀಠದ ಮರುಳುಸಿದ್ಧೇಶ್ವರ ಸ್ವಾಮಿಯ (Srimad Ujjaini Saddharma Simhasana Mahasamsthana Peetha) ದರ್ಶನ ಹಾಗೂ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ನಾಗರಿಕರ ಕಾಲಕ್ಷೇಪನ ಸಂಘದ ಪದಾಧಿಕಾರಿಗಳು, ಗ್ರಾಮದ ಮುಖಂಡರು ಕೊಟ್ಟೂರು ತಾಲ್ಲೂಕಿನ ಉಜ್ಜಿನಿ (ಉಜ್ಜಯಿನಿ) ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವಂತೆ ಸಚಿವ ಆನಂದ ಸಿಂಗ್ (Anand Singh) ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಪಂಚಪೀಠಗಳಲ್ಲಿ ಒಂದಾದ ಉಜ್ಜಿನಿ (ಉಜ್ಜಯಿನಿ) ಗ್ರಾಮ ತನ್ನದೇ ಆದ ಇತಿಹಾಸ ಹೊಂದಿದೆ. ನಿತ್ಯ ಅಸಂಖ್ಯಾತ ಭಕ್ತರು ಆಗಮಿಸುವ ಈ ಕ್ಷೇತ್ರ ಸುತ್ತಲಿನ ಗ್ರಾಮಗಳಿಗೂ ಆಸರೆಯಾಗಿದ್ದು ಹೋಬಳಿಯಾದರೆ ಸಮಗ್ರವಾಗಿ ಅಭಿವೃದ್ಧಿಯಾಗುವುದಲ್ಲದೆ, ಸರ್ಕಾರದ ಸೌಲಭ್ಯ ಪಡೆಯಲು ಸಹಕಾರಿ ಯಾಗುತ್ತದೆ ಎಂದು ಕಾಲಕ್ಷೇಪನ ಸಂಘದ ಅಧ್ಯಕ್ಷ ಎ.ಎಂ.ಚನ್ನವೀರಸ್ವಾಮಿ ಸಚಿವರಿಗೆ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್ ಈ ಕುರಿತು ಸಕಾರಾತ್ಮಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಜ್ಞಾನಗುರು ವಿದ್ಯಾಪೀಠ ಕಾರ್ಯ ದರ್ಶಿ ಎಂ.ಎಂ.ಜೆ.ಹರ್ಷವರ್ಧನ್, ಕಾಲಕ್ಷೇಪನ ಸಂಘದ ಕಾರ್ಯದರ್ಶಿ ಎಂ.ಮಲ್ಲಿಕಾರ್ಜುನ್, ವಕೀಲ ಮರುಳ ಸಿದ್ದಪ್ಪ, ಲೋಕೇಶ್ ಮತಿತ್ತರರು ಉಪಸ್ಥಿತರಿದ್ದರು.