Thursday, July 11, 2024
HomeIndiaNew DelhiUP ಚುನಾವಣೆ : Apna Dal ಮತ್ತು Nishad Party ಜೊತೆ BJP ಮೈತ್ರಿ

UP ಚುನಾವಣೆ : Apna Dal ಮತ್ತು Nishad Party ಜೊತೆ BJP ಮೈತ್ರಿ

New Delhi: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ (Uttar Pradesh Legsilative Assembly Elections) ಹೊಸ್ತಿಲಲ್ಲಿ BJP ಪಕ್ಷವು, ಅಪ್ನಾ ದಳ (Apna Dal (S)) ಮತ್ತು ನಿಶದ್ ಪಾರ್ಟಿ (Nishad Party) ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಬುಧವಾರ ಘೋಷಿಸಿದೆ.

ದೆಹಲಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ನಡ್ಡಾ (BJP National President J.P. Nadda) ಅಧಿಕೃತವಾಗಿ ಮೈತ್ರಿಯನ್ನು ಘೋಷಿಸಿದ್ದಾರೆ. ‘BJP , ಅಪನಾದಳ ಮತ್ತು ನಿಶಾದ್ ಪಾರ್ಟಿಗಳು ಒಟ್ಟಾಗಿ 403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಹೋರಾಡಲಿವೆ’ ಎಂದು ತಿಳಿಸಿದರು.

BJP ಅಧಿಕಾರಕ್ಕೆ ಬರುವ ಮೊದಲು ಉತ್ತರ ಪ್ರದೇಶದಲ್ಲಿ ಸರ್ಕಾರ ಮಾಫಿಯಾದೊಂದಿಗೆ ಕೆಲಸ ಮಾಡುತ್ತಿತ್ತು. ಯೋಗಿ ಆದಿತ್ಯನಾಥ್ ಸರ್ಕಾರದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪುನಃ ಸ್ಥಾಪನೆಯಾಗಿ, UP ಈಗ ಹೂಡಿಕೆಯ ತಾಣವಾಗಿದೆ. ರಾಜ್ಯದಲ್ಲಿ ಬಿಜೆಪಿಯ ‘Double Engine’ ಸರ್ಕಾರ ಅಧಿಕಾರದಲ್ಲಿದ್ದು, ಉತ್ತರ ಪ್ರದೇಶವು ಸಂಪರ್ಕ, ಶಿಕ್ಷಣ ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಪಡೆಯುತ್ತಿದೆ ಎಂದರು.

ಅಪ್ನಾ ದಳದ ಮುಖ್ಯಸ್ಥೆ ಅನುಪ್ರಿಯಾ ಪಟೇಲ್ (Anupriya Patel) ಮತ್ತು ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ (Sanjay Nishad) ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಳ (OBC) ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

- Advertisement -

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page