New York (USA): ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತ, ಚೀನಾ ಬಳಿಕ ಎರಡನೇ ಅತಿ ದೊಡ್ಡ ತೈಲ ಖರೀದಿದಾರ ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (US President Trump) ಭಾರತ ಮುಂದಿನ ದಿನಗಳಲ್ಲಿ ಹೆಚ್ಚುವರಿ ದ್ವಿತೀಯ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬುಧವಾರ ತಮ್ಮ ಕಚೇರಿಯಲ್ಲಿ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುವಿಕೆಯನ್ನು ಮುಂದುವರೆಸಿದ ಕಾರಣ ಭಾರತಕ್ಕೆ ಹೆಚ್ಚುವರಿ 25% ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಇದರಿಂದ ಭಾರತಕ್ಕೆ ವಿಧಿಸಿರುವ ಒಟ್ಟು ಸುಂಕ 50% ಆಗಲಿದೆ.
- ಈ ಹೆಚ್ಚುವರಿ ಸುಂಕ ಆಗಸ್ಟ್ 27ರಿಂದ ಜಾರಿಗೆ ಬರಲಿದೆ.
- ಟ್ರಂಪ್ ಆಡಳಿತ ಈಗಾಗಲೇ ಆಗಸ್ಟ್ 7ರಿಂದ 25% ಸುಂಕ ವಿಧಿಸುವುದಾಗಿ ಘೋಷಿಸಿತ್ತು.
ಟ್ರಂಪ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, “ಉಕ್ರೇನ್ ಮತ್ತು ರಷ್ಯಾ ನಡುವೆ ಒಪ್ಪಂದವಾದರೆ, ಭಾರತಕ್ಕೆ ವಿಧಿಸಿರುವ ಹೆಚ್ಚುವರಿ ಸುಂಕವನ್ನು ಕೈಬಿಡಬಹುದು” ಎಂದರು.
ಇತರೆ ದೇಶಗಳಿಗೆ ಹೋಲಿಕೆ
- ಚೀನಾ: 30% ಸುಂಕ
- ಟರ್ಕಿ: 15% ಸುಂಕ
- ಭಾರತ: 50% ಸುಂಕ (ಅತಿ ಹೆಚ್ಚು)
ಇತರೆ ದೇಶಗಳಿಗೂ ಇಂತಹ ಕ್ರಮ ಕೈಗೊಳ್ಳಲಾಗುವುದು, ಅದರಲ್ಲಿ ಚೀನಾ ಕೂಡ ಇರಬಹುದು ಎಂದು ಟ್ರಂಪ್ ಹೇಳಿದರು.
ಈ ಘೋಷಣೆಯ ಸಂದರ್ಭದಲ್ಲಿ ಟ್ರಂಪ್ ಜೊತೆ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಆ್ಯಪಲ್ ಸಿಇಒ ಟಿಮ್ ಕುಕ್, ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹಾಗೂ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹಾಜರಿದ್ದರು. ಇದೇ ವೇಳೆ ಆ್ಯಪಲ್ ಕಂಪನಿ ಮುಂದಿನ ನಾಲ್ಕು ವರ್ಷಗಳಲ್ಲಿ ಅಮೆರಿಕದಲ್ಲಿ 600 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿದೆ.