back to top
25.8 C
Bengaluru
Saturday, August 30, 2025
HomeChikkaballapuraGauribidanurಕೆರೆ ನೀರನ್ನು ನಗರಕ್ಕೆ ತರುವುದನ್ನು ವಿರೋಧಿಸಿ ತಮಟೆ ಚಳವಳಿ

ಕೆರೆ ನೀರನ್ನು ನಗರಕ್ಕೆ ತರುವುದನ್ನು ವಿರೋಧಿಸಿ ತಮಟೆ ಚಳವಳಿ

- Advertisement -
- Advertisement -

Gauribidanur : ವಾಟದಹೊಸಹಳ್ಳಿ(Vatadahosahalli) ಕೆರೆ ನೀರನ್ನು ನಗರಕ್ಕೆ ತರುವುದನ್ನು ವಿರೋಧಿಸಿ ರೈತರು ತಾಲ್ಲೂಕು ಕಚೇರಿ ಮುಂದೆ ನಡೆಸುತ್ತಿರುವ ಪ್ರತಿಭಟನೆ (farmers protest) 11ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ತಮಟೆ ಚಳವಳಿಯನ್ನು ಹಮ್ಮಿಕೊಂಡು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ವಾಟದಹೊಸಹಳ್ಳಿ ಅಚ್ಚುಕಟ್ಟುದಾರರ ಸಂಘದ ಅಧ್ಯಕ್ಷ ಮಾಳಪ್ಪ ಮಾತನಾಡಿ, “ನಮ್ಮ ಹೋರಾಟಕ್ಕೆ ಅಧಿಕಾರಿಗಳೂ ಪ್ರತಿನಿಧಿಗಳೂ ಸ್ಪಂದಿಸುತ್ತಿಲ್ಲ. ರೈತರು ದೇಶದ ಬೆನ್ನೆಲುಬು, ಆದರೆ ಅವರನ್ನೇ ಹಿಂಸಿಸುತ್ತಿದ್ದಾರೆ. ₹65 ಕೋಟಿ ತೆರಿಗೆ ಹಣ ವ್ಯರ್ಥವಾಗುತ್ತದೆ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಸಾವಿರಾರು ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಾರೆ” ಎಂದು ಎಚ್ಚರಿಕೆ ನೀಡಿದರು.

ಮಧು ಸೂರ್ಯನಾರಾಯಣರೆಡ್ಡಿ, ಹರ್ಷವರ್ಧನ್ ರೆಡ್ಡಿ, ರವಿಚಂದ್ರರೆಡ್ಡಿ, ಕೋಡಿರ್ಲಪ್ಪ ಸೇರಿದಂತೆ ಹಲವಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

The post ಕೆರೆ ನೀರನ್ನು ನಗರಕ್ಕೆ ತರುವುದನ್ನು ವಿರೋಧಿಸಿ ತಮಟೆ ಚಳವಳಿ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page