back to top
26.7 C
Bengaluru
Wednesday, July 30, 2025
HomeNewsಅಕ್ಕನಿಗೆ ಸಮರ್ಪಿತ ಜಯ: Edgbaston ನಲ್ಲಿ Akash Deep ಅವರ ಐತಿಹಾಸಿಕ 10 ವಿಕೆಟ್ ಪ್ರದರ್ಶನ

ಅಕ್ಕನಿಗೆ ಸಮರ್ಪಿತ ಜಯ: Edgbaston ನಲ್ಲಿ Akash Deep ಅವರ ಐತಿಹಾಸಿಕ 10 ವಿಕೆಟ್ ಪ್ರದರ್ಶನ

- Advertisement -
- Advertisement -

ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 336 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಎಡ್ಜ್‌ಬಾಸ್ಟನ್‌ನಲ್ಲಿ (Edgbaston) ನಡೆದ ಈ ಪಂದ್ಯದಲ್ಲಿ ಭಾರತ 608 ರನ್ ಗುರಿ ನೀಡಿದ್ದರೂ, ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 271 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 58 ವರ್ಷಗಳ ನಂತರ ಈ ಮೈದಾನದಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಗೆದ್ದಿದೆ.

ಭಾರತದ ಪ್ರಮುಖ ವೇಗಿ ಬುಮ್ರಾ ಈ ಪಂದ್ಯಕ್ಕೆ ಲಭ್ಯವಿರಲಿಲ್ಲ. ಅವರ ಬದಲು ಅವಕಾಶ ಪಡೆದ ಆಕಾಶ್ ದೀಪ್ ಅದನ್ನು ಅತ್ಯುತ್ತಮವಾಗಿ ಸದುಪಯೋಗ ಮಾಡಿಕೊಂಡರು. ಅವರು ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್, ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಒಟ್ಟು 10 ವಿಕೆಟ್ ಕಬಳಿಸಿದರು. ಇದರಿಂದಾಗಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಆಕಾಶ್ ದೀಪ್, ಎಡ್ಜ್‌ಬಾಸ್ಟನ್‌ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಈ ಮೈದಾನದಲ್ಲಿ ಅಂಥ ಸಾಧನೆ ಮಾಡಿದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. 1986ರಲ್ಲಿ ಚೇತನ್ ಶರ್ಮಾ ಇದೇ ಮೈದಾನದಲ್ಲಿ ಇದೇ ಸಾಧನೆ ಮಾಡಿದ್ದರು. ಆಕಾಶ್ ದೀಪ್ 10 ವಿಕೆಟ್‌ಗಾಗಿ 187 ರನ್ ನೀಡಿದ್ದರು.

ಇಂಗ್ಲೆಂಡಿನಲ್ಲಿ 10 ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿ

  • ಆಕಾಶ್ ದೀಪ್ – 10/187 (ಬರ್ಮಿಂಗ್‌ಹ್ಯಾಮ್, 2025)
  • ಚೇತನ್ ಶರ್ಮಾ – 10/188 (ಬರ್ಮಿಂಗ್‌ಹ್ಯಾಮ್, 1986)
  • ಜಸ್ಪ್ರೀತ್ ಬುಮ್ರಾ – 9/110 (ಟ್ರೆಂಟ್ ಬ್ರಿಡ್ಜ್, 2021)
  • ಜಹೀರ್ ಖಾನ್ – 9/134 (ಟ್ರೆಂಟ್ ಬ್ರಿಡ್ಜ್, 2007)

ಪಂದ್ಯವನ್ನು ಅಕ್ಕನಿಗೆ ಅರ್ಪಿಸಿದ ಆಕಾಶ್ ದೀಪ್: ಪಂದ್ಯದ ನಂತರ ಆಕಾಶ್ ದೀಪ್ ಭಾವುಕರಾಗಿ ಮಾತನಾಡಿದರು. ತಮ್ಮ ಅಕ್ಕನಿಗೆ ಕ್ಯಾನ್ಸರ್ ಇರುವ ಬಗ್ಗೆ ಚೇತೇಶ್ವರ ಪೂಜಾರ ಜತೆ ಮಾತನಾಡಿದ ಅವರು, “ನಾನು ಪ್ರತಿ ಚೆಂಡು ಎಸೆದಾಗಲೂ ನನ್ನ ಅಕ್ಕನ ಬಗ್ಗೆ ಯೋಚಿಸುತ್ತಿದ್ದೆ. ಈ ಪಂದ್ಯವನ್ನು ಅವಳಿಗೆ ಅರ್ಪಿಸುತ್ತೇನೆ. ಅವಳಿಗೆ ಧೈರ್ಯ ತುಂಬಿಸಲು ಹೇಳುತ್ೇನೆ – ನಾವು ಎಲ್ಲರೂ ನಿನ್ನ ಜೊತೆಯಲ್ಲಿದ್ದೇವೆ” ಎಂದು ಭಾವೋದ್ರೇಕದಿಂದ ಹೇಳಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page