ಡಿಸೆಂಬರ್ 21 ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಏಕದಿನ ಟೂರ್ನಿಗೆ (Vijay Hazare Trophy) ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿದ್ದು, ಶ್ರೇಯಸ್ ಗೋಪಾಲ್ ಅವರನ್ನು ಉಪನಾಯಕನಾಗಿ ನೇಮಿಸಲಾಗಿದೆ.
ಈ ಬಾರಿ ಅನುಭವಿ ಆಟಗಾರರಿಗೆ ಸ್ಥಾನ ನೀಡಲಾಗಿಲ್ಲ, ಬದಲಾಗಿ ಯುವ ಆಟಗಾರರಿಗೆ ಹೆಚ್ಚುವರಿ ಅವಕಾಶ ದೊರಕಿದೆ. ಐಪಿಎಲ್ ಹರಾಜಿನಲ್ಲಿ ಅನ್ ಸೋಲ್ಡ್ ಆದ ಮಯಾಂಕ್ ಅಗರ್ವಾಲ್, ಸೀಮಿತ ಓವರ್ ಗಳ ಟೂರ್ನಿಗೆ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಶ್ರೇಯಸ್ ಗೋಪಾಲ್, ಶ್ರೇಷ್ಠ ಪ್ರದರ್ಶನ ನೀಡಿ, ಕರ್ನಾಟಕದ ಪರ 14 ವಿಕೆಟ್ ಗಳಿಸಿದ ಸಾಧನೆಯೊಂದಿಗೆ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಮನೀಷ್ ಪಾಂಡೆ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಈ ಬಾರಿ ಕರ್ನಾಟಕ ತಂಡದಲ್ಲಿ ಹೊಸ ಹಾಗೂ ಅನುಭವಿ ಆಟಗಾರರ ಸಮನ್ವಯವಿದೆ, ಮತ್ತು ಕಪ್ ಗೆಲ್ಲಲು ಉತ್ತಮ ಅವಕಾಶಗಳಿವೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಎಸ್ ನಿಕಿನ್ ಜೋಸ್, ಕೆವಿ ಅನೀಶ್, ಆರ್ ಸ್ಮರನ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಹಾರ್ದಿಕ್ ರಾಜ್, ವೈಶಾಕ್ ವಿಜಯ್ ಕುಮಾರ್, ವಾಸುಕಿ ಕೌಶಿಕ್, ವಿದ್ಯಾಧರ್ ಪಾಟೀಲ್, ಕಿಶನ್ ಬೇಡರೆ, ಅಭಿಲಾಷ್ ಶೆಟ್ಟಿ, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ.