ಭಾರತ ಆಸ್ಟ್ರೇಲಿಯಾ (India-Australia) ಪ್ರವಾಸವನ್ನು ಮುಗಿಸಿ, ಸದ್ಯ ಟೀಮ್ ಇಂಡಿಯಾದ (Team India) ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ಹಲವು ಆಟಗಾರರು ದೇಶೀಯ ಟೂರ್ನಿಯಲ್ಲಿ ತಮ್ಮ ರಾಜ್ಯದ ತಂಡಗಳ ಪರ ಕಣಕ್ಕೆ ಇಳಿಯಲು ತಯಾರಾಗಿದ್ದಾರೆ. ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದೆ, ಐದು ಪಂದ್ಯಗಳ ಸರಣಿಯಲ್ಲಿ 1-3 ರಿಂದ ಹಿನ್ನಡೆ ಅನುಭವಿಸಿದೆ. ಕೆಲವೊಂದು ಟೀಕೆಗಳು ವಿರೋಧಾತ್ಮಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗಿವೆ.
ಟೀಮ್ ಇಂಡಿಯಾ ಮುಂದಿನ ಸರಣಿಯನ್ನು ಜನವರಿ 22 ರಂದು ಆಡಲಿದೆ. ಈ ನಡುವಿನ ಸಮಯವನ್ನು ಯುವ ಆಟಗಾರರು ಚೆನ್ನಾಗಿ ಸದುಪಯೋಗ ಪಡಿಸುವ ಮೂಲಕ, ದೇಶೀಯ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಈಗಾಗಲೇ ಮುಗಿದಿದ್ದು, ನಾಳೆಯಿಂದ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಭಾಗವಹಿಸಿದ್ದ ಅಭಿಮನ್ಯು ಈಶ್ವರನ್, ಪ್ರಸಿದ್ಧ ಕೃಷ್ಣಾ, ದೇವದತ್ ಪಡಿಕ್ಕಲ್ ಈಗ ವಿಜಯ್ ಹಜಾರೆ ಟೂರ್ನಿಯಲ್ಲಿ ಭಾಗವಹಿಸಬಹುದು. ಇವರಿಗೆ ತಂಡದಿಂದ ಹೊರ ಹೋಗಿ ತಮ್ಮ ರಾಜ್ಯದ ತಂಡಗಳಲ್ಲಿ ಸೇರಿಕೊಳ್ಳಲು ಅನುಮತಿ ನೀಡಲಾಗಿದೆ.
ಅಭಿಮನ್ಯು ಈಶ್ವರನ್ ಬಂಗಾಳ ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ. ಅವರು ಬುಧವಾರ ಬಂಗಾಳ ತಂಡದಲ್ಲಿ ಕಾಣಿಸಿಕೊಳ್ಳಬಹುದು. ಪ್ರಸಿದ್ಧ ಕೃಷ್ಣಾ ಮತ್ತು ದೇವದತ್ ಪಡಿಕ್ಕಲ್ ಕರ್ನಾಟಕ ತಂಡವನ್ನು ಸೇರುವ ಸಾಧ್ಯತೆ ಇದೆ. ಕರ್ನಾಟಕ ತಂಡವು ಜನವರಿ 11 ರಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ. ಪ್ರಸಿದ್ಧ ಕೃಷ್ಣಾ ಸಿಡ್ನಿ ಟೆಸ್ಟ್ ನಲ್ಲಿ ಆಡುವ ಅವಕಾಶ ಪಡೆದರು, ಮತ್ತು ಅವರು 6 ವಿಕೆಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ದೇವದತ್ ಪಡಿಕ್ಕಲ್ ಪರ್ತ್ ಟೆಸ್ಟ್ ನಲ್ಲಿ ಆಡಲು ಅವಕಾಶ ಪಡೆದಿದ್ದರು, ಆದರೆ ಈ ಅವಕಾಶವನ್ನು ಎರಡೂ ಕೈಗಳಿಂದ ಕೈ ಚೆಲ್ಲಿದ್ದರು.