
ಕೇರಳ ಹೈಕೋರ್ಟ್ (Kerala High Court) ಮಹಿಳೆಯ ದೇಹ ರಚನೆ ಕುರಿತು ಮಾಡಿದ ಕಾಮೆಂಟ್ ಅನ್ನು ಲೈಂಗಿಕ ಬಣ್ಣದ ಟೀಕೆ ಎಂದು ವರ್ಣಿಸಿಕೊಂಡು ಅದನ್ನು ಲೈಂಗಿಕ ಕಿರುಕುಳದ ರೂಪವೆಂದು ಪರಿಗಣಿಸಿದೆ. ಕೆಎಸ್ಇಬಿ ಮಾಜಿ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವ ಮನವಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ತೀರ್ಪು ನೀಡಿತು.
ಈ ಕುರಿತು ಮಹಿಳೆ ನೀಡಿದ ದೂರಿನಲ್ಲಿ, ಆರೋಪಿಯು 2013 ರಿಂದ ಅವಮಾನಕಾರಿಯಾದ ಪದಗಳನ್ನು ಬಳಸಿಕೊಂಡು, 2016-17 ರಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಹಾಗೂ ಧ್ವನಿ ಕರೆಗಳನ್ನು ಕಳುಹಿಸಿದನೆಂದು ಹೇಳಿದಳು. ಮಹಿಳೆ ಆರೋಪಿಯನ್ನು ಪೊಲೀಸರು ಮತ್ತು ಕೆಎಸ್ಇಬಿಗೆ ದೂರು ನೀಡಿದರೂ, ಅವನು ಕಿರುಕುಳ ಕೊಡುತ್ತಿದ್ದ.
ನ್ಯಾಯಮೂರ್ತಿ ಎ ಬದರುದ್ದೀನ್ ಅವರು ತೀರ್ಪಿನಲ್ಲಿ, ಕೇರಳ ಹೈಕೋರ್ಟ್ ಪ್ರಾಥಮಿಕವಾಗಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಅಂಶಗಳನ್ನು ದೃಢೀಕರಿಸಿ, ಈ ಅಪರಾಧಗಳನ್ನು ತಳ್ಳಿ ಹಾಕಲು ಸಲ್ಲಿಸಿದ ಮನವಿಯನ್ನು ನಿರಾಕರಿಸಿದೆ.
ಜನವರಿ 6ರಂದು ನೀಡಿದ ಆದೇಶದಲ್ಲಿ, ಈ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಲು ಪ್ರಾಸಿಕ್ಯೂಷನ್ ಸಲ್ಲಿಸಿದ ವಾದಗಳನ್ನು ಒಪ್ಪಿಕೊಂಡು, ಇದಕ್ಕೆ ಸಂಬಂಧಿಸಿದ ಮಧ್ಯಂತರ ಆದೇಶವನ್ನು ರದ್ದುಗೊಳಿಸಿತು.