Friday, March 29, 2024
HomeKarnatakaBengaluru Ruralವಿಜಯಪುರ ಗ್ರಾಮದೇವತೆ ಗಂಗಾತಾಯಿ ಜಾತ್ರಾ ಮಹೋತ್ಸವ

ವಿಜಯಪುರ ಗ್ರಾಮದೇವತೆ ಗಂಗಾತಾಯಿ ಜಾತ್ರಾ ಮಹೋತ್ಸವ

Vijayapur (Vijipura), Bengaluru Rural : Covid-19 ನಿಂದ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ 52ನೇ ವರ್ಷದ ಗ್ರಾಮದೇವತೆ ಗಂಗಾತಾಯಿ ಜಾತ್ರಾ ಮಹೋತ್ಸವಕ್ಕೆ (Gangatayi Jathre Mahotsava) ಸೋಮವಾರ ಬೆಳಿಗ್ಗೆ ಜಲಗಂಗಮ್ಮನನ್ನು ತರುವ ಮೂಲಕ ಅದ್ದೂರಿ ಚಾಲನೆ ದೊರೆತ್ತಿದೆ .

ಸೋಮವಾರ ಬೆಳಿಗ್ಗೆ 6 ಗಂಟೆಗೆ ಗಂಗಾತಾಯಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ತೆರಳಿ ಸಂಗಮೇಶ್ವರಸ್ವಾಮಿ ದೇವಾಲಯದ ಬಳಿ ನಿರ್ಮಾಣ ಮಾಡಿದ್ದ ತೊಟ್ಟಿಯಲ್ಲಿ ದೇವಾಲಯದ ಅರ್ಚಕ ಕುಮಾರ್ ಅವರು, ವಿಧಿವಿಧಾನಗಳ ಪ್ರಕಾರ ಪೂಜೆ ಸಲ್ಲಿಸಿ, ಗಂಗೆ ಪ್ರಾರ್ಥಿಸಿ ಮಂಗಳವಾದ್ಯ, ತಮಟೆ ವಾದನಗಳೊಂದಿಗೆ ಮೆರವಣಿಗೆ ಮೂಲಕ ದೇವಾಲಯಕ್ಕೆ ಬರಮಾಡಿಕೊಂಡರು.

ಪಟ್ಟಣದ ನಾರಾಯಣಶೆಟ್ಟರ ಮನೆಯಿಂದ ಮಲ್ಲಾರವನ್ನು ಪಟ್ಟಣದ ರಾಜಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಕರೆತಂದು ಪೂಜೆ ಸಲ್ಲಿಸಿದ ನಂತರ ಗಂಗಾತಾಯಿಗೆ ಬಳೆ ತೊಡಿಸಲಾಯಿತು. ನಂತರ ದೇವಾಲಯದ ಬಳಿ 108 ಕಲಶ ಪೂಜಿಸಲಾಗಿತ್ತು.

ಜಾತ್ರಾ ಸಮಿತಿ ಸದಸ್ಯರು ಹಾಗೂ ಪಟ್ಟಣ ಎಲ್ಲ ಸಮುದಾಯಗಳ ಮುಖಂಡರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಗಂಗೆ ತರುವ ಕಾರ್ಯಕ್ರಮದಲ್ಲಿ ಮೆರವಣಿಯಲ್ಲಿ ಪಾಲ್ಗೊಂಡಿದ್ದರು.

- Advertisement -

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page