Vijayapura, Devanahalli, Bengaluru Rural : ದೇವನಹಳ್ಳಿ ತಾಲ್ಲೂಕು ವಿಜಯಪುರದ ಚನ್ನರಾಯಪಟ್ಟಣ ಹೋಬಳಿಯ ಮಲ್ಲೇಪುರ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದ ನಾಮಫಲಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ (Dr. B. R. Ambedkar) ಭಾವಚಿತ್ರವನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಅವರ ಮೇಲೆ ದಲಿತ ದೌರ್ಜನ್ಯದಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮಲ್ಲೇಪುರ ಗ್ರಾಮಸ್ಥರು Police Station ನಲ್ಲಿ ದೂರು ಸಲ್ಲಿಸಿದರು.
“1996 ರಿಂದ ನಾವು 107 ಮಂದಿ ಫಲಾನುಭವಿಗಳು 16 ಎಕರೆ 30 ಗುಂಟೆ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದೇವೆ. 2014 ರಲ್ಲಿ ಮನೆಗಳನ್ನು ನಿರ್ಮಾಣ ಮಾಡಿ, ದೇವಾಲಯ ನಿರ್ಮಾಣ ಮಾಡಿ, ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕವನ್ನೂ ನಿರ್ಮಾಣ ಮಾಡಿದ್ದೆವು. ನಮ್ಮ ಗ್ರಾಮದ ವೆಂಕಟೇಶಪ್ಪ ಈ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ನ್ಯಾಯಾಲಯಕ್ಕೆ ಹೋಗಿದ್ದರು. ಹಿಂದೆ ನಮ್ಮ ಮೇಲೆ ಕೇಸುಗಳು ಹಾಕಿದ್ದ ನಂತರ ಠಾಣೆಗೆ ಹೋಗಿ ನಾವು ಅವರ ಮೇಲೆ ದೌರ್ಜನ್ಯ ವೆಸಗಿಲ್ಲ ಎಂದು ಗೊತ್ತಾದ ಮೇಲೆ ನಮ್ಮನ್ನು ಬಿಡುಗಡೆಗೊಳಿಸಿದ್ದರು.
ಈ ಭೂಮಿಯ ಕುರಿತು ಅನೇಕ ವರ್ಷಗಳಿಂದ ನ್ಯಾಯಾಲಯಗಳಲ್ಲಿ ವಿಚಾರಣೆಗಳು ನಡೆದಿವೆ. ಆದರೆ, ನ್ಯಾಯಾಲಯದಲ್ಲಿ ಮೂಲ ದಾಖಲೆಗಳನ್ನು ತರುವಂತೆ ಹೇಳಿದ್ದರಿಂದ ಮೂಲದಾಖಲೆಗಳನ್ನು ಹಾಜರುಪಡಿಸಲಿಕ್ಕೆ ವಿಫಲರಾಗಿದ್ದರು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಂಬೇಡ್ಕರ್ ಭಾವಚಿತ್ರವನ್ನು ವಿರೂಪಗೊಳಿಸಿದ್ದಾರೆ ” ಎಂದು ಮುಖಂಡ ಮುನಿಶಾಮಪ್ಪ ಆರೋಪಿಸಿದರು.
ಪ್ರಕರಣಕ್ಕೆ ಸಂಬಂದಿಸಿದಂತೆ ವಿಜಯಪುರ ವೃತ್ತದ ಸರ್ಕಲ್ ಇನ್ ಸ್ಪೆಕ್ಟರ್, ಟಿ.ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.