Vijayapura, Devanahalli Taluk, Bengaluru Rural : Gun ಹಾಗೂ ಚಾಕು ತೋರಿಸಿ ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡದಿದೆ.
ವಿಜಯಪುರ ಪಟ್ಟಣದ ಜೂನಿಯರ್ ಕಾಲೇಜಿನ (Junior College) ಮುಂಭಾಗದ ಖಾಸಗಿ ಕ್ಲಿನಿಕ್ ವೈದ್ಯ (Doctor) ಡಾ.ರಾಜಕುಮಾರ್ ಅವರ ಮನೆಗೆ ನುಗ್ಗಿರುವ ನಾಲ್ವರು ಅಪರಿಚಿತರು ನುಗ್ಗಿ ಮನೆಯಲ್ಲಿದ್ದ ವೈದ್ಯರ ಪತ್ನಿ, ಪುತ್ರಿ ಹಾಗೂ ಅಳಿಯನಿಗೆ ಗನ್ ತೋರಿಸಿ ಅವರ ಬಳಿಯಿದ್ದ 60 ಗ್ರಾಂ ಚಿನ್ನದ ಸರ, ಪುತ್ರಿ ಕತ್ತಿನಲ್ಲಿದ್ದ 90 ಗ್ರಾಂ ಚಿನ್ನದ ಸರ, ಬಳೆ ಹಾಗೂ ₹5,000 ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ಸೋಮವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ನಡೆದಿದೆ.
“ಮಾಸ್ಕ್ ಧರಿಸಿಕೊಂಡು ಮನೆಯೊಳಗೆ ನುಗ್ಗಿದ್ದ ಮೂವರು ಮಂದಿ ಹಿಂದಿ ಭಾಷೆ ಮಾತನಾಡುತ್ತಿದ್ದರು. ಹಣ ಎಷ್ಟಿದೆ ಕೊಡಿ ಎಂದು ಒತ್ತಾಯಿಸಿದರು. ಮನೆಯಲ್ಲಿನ Briefcase ಕಿತ್ತುಹಾಕಿ ಜೋರಾಗಿ ಕೂಗಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದರು. ಗನ್ ಹಾಗೂ ಚಾಕು ತೋರಿಸಿ ಪರಾರಿಯಾದರು ” ಎಂದು ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು.
ವೈದ್ಯರ ಕುಟುಂಬದವರಿಂದ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.