Home Devanahalli Vijayapura | Devanahalli ಹಲ್ಲೆ ಪ್ರಕರಣ: ದೂರು ದಾಖಲಿಸದ ಪೊಲೀಸರು, ಕುಟುಂಬಸ್ಥರ ಪ್ರತಿಭಟನೆ

ಹಲ್ಲೆ ಪ್ರಕರಣ: ದೂರು ದಾಖಲಿಸದ ಪೊಲೀಸರು, ಕುಟುಂಬಸ್ಥರ ಪ್ರತಿಭಟನೆ

Devanahalli Vijayapura Police complaint Protest

Vijayapura, Devanahalli : ದೊಡ್ಡತತ್ತಮಂಗಲದ ಹಲ್ಲೆ ಪ್ರಕರಣದಲ್ಲಿ Complaint ದಾಖಲಿಸದ Police ರ ವಿರುದ್ಧ ಕಿಡಿಕಾರುತ್ತಾ ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಕುಟುಂಬಸ್ಥರು ಗುರುವಾರ ರಾತ್ರಿ ಪ್ರತಿಭಟನೆ ನಡೆಸಿತು.

ಗುಡುವನಹಳ್ಳಿ ಬಳಿಯ ಜಮೀನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತಿಲಕ್, ಅವರ ಪತ್ನಿ ಮತ್ತು ಹಾಲಿ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಚಂದ್ರಶೇಖರ್ ಅವರು ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿಸಲಾಗಿದೆ.

ಹಲ್ಲೆ ಸಂಬಂಧ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಕುಟುಂಬಸ್ಥರಾದ ಲಕ್ಷ್ಮಮ್ಮ ಹೇಳಿದ್ದಾರೆ.

“ನಾವು ನಾಯಕ ಜನಾಂಗಕ್ಕೆ ಸೇರಿದವರು, ಮಧ್ಯಾಹ್ನ 3 ಗಂಟೆಗೆ ಠಾಣೆಗೆ ಹೋಗಿ ದೂರು ದಾಖಲಿಸಲು ಮನವಿ ಮಾಡಿದ್ದೆವು. ಆದರೆ, ರಾತ್ರಿ 11 ಗಂಟೆವರೆಗೆ ಕಾಯಿಸಿದರು,” ಎಂದು ಲಕ್ಷ್ಮಮ್ಮ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಸ್ಥಿತಿಗತಿ ಗಂಭೀರ ರೂಪಕ್ಕೆ ತಿರುಗಿದಾಗ, ಹಲ್ಲೆ ಸಂಬಂಧ ದೂರು ದಾಖಲಿಸುವವರೆಗೆ ಠಾಣೆ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟುಹಿಡಿದ ನಂತರ, ಕೊನೆಗೂ ಪೊಲೀಸರಿಂದ ರಾತ್ರಿ 11 ಗಂಟೆಗೆ ಎಫ್‌ಐಆರ್ ದಾಖಲಿಸಲಾಗಿತ್ತು. FIR ಪ್ರತಿಯನ್ನು ಪಡೆದುಕೊಂಡ ನಂತರ ಮಾತ್ರ ಕುಟುಂಬಸ್ಥರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version