Vijayapura, Bengaluru Rural : ವಿಜಯಪುರ ಪಟ್ಟಣದಲ್ಲಿ ಮಂಗಳವಾರ ರೇಷ್ಮೆ ಗೂಡು ಮಾರುಕಟ್ಟೆ (Silk Cocoon Market) ಉಪನಿರ್ದೇಶಕ ಸುಂದರರಾಜ್ ಸುದ್ಧಿಗೋಷ್ಠಿ ನಡೆಸಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಉಪನಿರ್ದೇಶಕ ಸುಂದರರಾಜ್ ” ವಿಜಯಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೈತರು ಬೆಳೆದಂತಹ ರೇಷ್ಮೆಗೂಡಿಗೆ ಉತ್ತಮ ಬೆಲೆ ಸಿಗುತ್ತಿದ್ದೆ.ರೈತರಿಗೆ ಅನುಕೂಲವಾದ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಕಲ್ಪಿಸಲಾಗಿದ್ದು ಇ-ಹರಾಜಿನಲ್ಲಿ ಭಾಗವಹಿಸುವ ನೂಲು ಬಿಚ್ಚಾಣಿಕೆದಾರರಿಂದ ಹರಾಜಿಗೂ ಮೊದಲೇ ಹಣವನ್ನು ನಮ್ಮ ಖಾತೆಗೆ ಜಮೆ ಮಾಡಿಸಿಕೊಂಡ ನಂತರವೇ ಅವರಿಗೆ ಹರಾಜಿನಲ್ಲಿ ಭಾಗವಹಿಸಲಿಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಇ-ಹರಾಜಿನಲ್ಲಿ (e- Auction) Reeler ಗಳು ಕೊಟ್ಟಿರುವ ಬೆಲೆಯನ್ನು ರೈತರು ಒಪ್ಪಿಕೊಂಡ ನಂತರವೇ ತೂಕ ಮಾಡಲಿಕ್ಕೆ ಅನುಮತಿ ಕೊಡಲಾಗುತ್ತಿದೆ. ಮೂರು ಬಾರಿ ಹರಾಜಿನಲ್ಲಿ ನೀಡಿರುವ ಬೆಲೆಯು ರೈತರಿಗೆ ಸಮಾಧಾನವಾಗದಿದ್ದಲ್ಲಿ ಮಾರುಕಟ್ಟೆಯ ಅಧಿಕಾರಿಗಳು ರೈತರ ಬಳಿಗೆ ಹೋಗಿ ಅವರೊಂದಿಗೆ ಸಮಾಲೋಚನೆ ಮಾಡಿದ ನಂತರವೇ ಹರಾಜು ಮುಕ್ತಾಯಗೊಳಿಸಲಾಗುತ್ತಿದೆ. ಆದ್ದರಿಂದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ. ರೈತರ ಬ್ಯಾಂಕ್ ಖಾತೆಗಳಿಗೆ ಗೂಡು ತೂಕ ಮಾಡಿದ ನಂತರ 20 ನಿಮಿಷದಲ್ಲಿ ಹಣ ಜಮೆ ಮಾಡುವಂತಹ ವ್ಯವಸ್ಥೆ ನಮ್ಮಲ್ಲಿದೆ. ಆದ್ದರಿಂದ ರೈತರು ಗೂಡನ್ನು ಮಾರುಕಟ್ಟೆಗೆ ತೆಗೆದುಕೊಂಡು ಬನ್ನಿ” ಎಂದು ತಿಳಿಸಿದರು.