Team India ದ ಆಟಗಾರ Virat Kohli, South Africa ವಿರುದ್ಧ ಟೆಸ್ಟ್ ಸರಣಿ ಸೋತ ಬೆನ್ನಲೇ ತಮ್ಮ Test Cricket ನಾಯಕ ಸ್ಥಾನವನ್ನು ತ್ಯಜಿಸಿದ್ದಾರೆ. “7 ವರ್ಷ Team India ಟೆಸ್ಟ್ ನಾಯಕನಾಗಿದ್ದು ನಾನು ನನ್ನ ಕೆಲಸವನ್ನು ಪೂರ್ಣ ಪ್ರಾಮಾಣಿಕತೆಯಿಂದ ಮಾಡಿದ್ದೇನೆ. ಈ ಅವಕಾಶ ನೀಡಿದ BCCI ಗೆ ಮತ್ತು ನನ್ನ ಮೇಲೆ ಅತ್ಯಂತ ವಿಶ್ವಾಸವಿತ್ತು ತಂಡವನ್ನು ಮುನ್ನೆಡೆಸಲು ಯೋಗ್ಯನೆಂದು ಭಾವಿಸಿದ ಮಹೇಂದ್ರ ಸಿಂಗ್ ಧೋನಿಗೆ (Mahendra Singh Dhoni) ಧನ್ಯವಾದಗಳು” ಎಂದು ಪತ್ರದ ಮೂಲಕ ವಿರಾಟ್ ಕೊಹ್ಲಿ Tweet ಮಾಡಿದ್ದಾರೆ.
68 ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ 40 ಪಂದ್ಯಗಳಲ್ಲಿ ಗೆದ್ದು 17 ರಲ್ಲಿ ಸೋತು 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.