ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಟಿ-20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಅವರು 13,000 ರನ್ ಪೂರೈಸಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಸೋಮವಾರ ನಡೆದ IPL ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ RCB ತಂಡದ ಪರವಾಗಿ ಈ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಕೊಹ್ಲಿ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 67 ರನ್ ಗಳಿಸಿದರು. ಒಟ್ಟು 386 ಇನ್ನಿಂಗ್ಸ್‌ಗಳಲ್ಲಿ ಅವರು 13,000 ರನ್‌ಗಳನ್ನು ಮುಟ್ಟಿದ್ದಾರೆ. ಈ ಸಾಧನೆಯೊಂದಿಗೆ ಕೊಹ್ಲಿ ಟಿ-20 ಕ್ರಿಕೆಟ್‌ನಲ್ಲಿ ಈ ಮಟ್ಟದ ಸಾಧನೆ ಮಾಡಿದ ಐದನೇ ಆಟಗಾರರಾಗಿದ್ದಾರೆ. ಇತರೆ ನಾಲ್ಕು ಆಟಗಾರರು ವಿದೇಶೀ ಕ್ರಿಕೆಟ್‌ನವರಾಗಿದ್ದಾರೆ.
ಟಿ-20 ಕ್ರಿಕೆಟ್‌ನಲ್ಲಿ 13,000 ಕ್ಕೂ ಹೆಚ್ಚು ರನ್ ಮಾಡಿದ ಆಟಗಾರರ ಪಟ್ಟಿ
- ಕ್ರಿಸ್ ಗೇಲ್ – 14,562 ರನ್ (381 ಪಂದ್ಯಗಳು)
- ಅಲೆಕ್ಸ್ ಹೆಲ್ಸ್ – 13,610 ರನ್ (474 ಪಂದ್ಯಗಳು)
- ಶೋಯಬ್ ಮಾಲಿಕ್ – 13,557 ರನ್ (487 ಪಂದ್ಯಗಳು)
- ಕೀರನ್ ಪೊಲಾರ್ಡ್ – 13,537 ರನ್ (594 ಪಂದ್ಯಗಳು)
- ವಿರಾಟ್ ಕೊಹ್ಲಿ – 13,050 ರನ್ (386 ಪಂದ್ಯಗಳು)
ನಿನ್ನೆ ನಡೆದ RCB vs MI ಹೈಲೈಟ್‌ಗಳು
RCB ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತು. ಕೊಹ್ಲಿ (67), ರಜತ್ ಪಾಟಿದಾರ್ (64), ಪಡಿಕ್ಕಲ್ (37), ಜಿತೇಶ್ ಶರ್ಮಾ (40) ರನ್ ಗಳಿಸಿ ಮಿಂಚಿದರು.
ಇದಕ್ಕೆ ಪ್ರತಿಯಾಗಿ ಮುಂಬೈ ಇಂಡಿಯನ್ಸ್ 9 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು. RCB 12 ರನ್‌ಗಳ ರೋಚಕ ಜಯ ಸಿಕ್ಕಿತು.
ಮುಂಬೈ ವಿರುದ್ಧ 2015ರ ನಂತರ ಇದೇ ಮೊದಲ ಬಾರಿ ವಾಂಖೆಡೆ ಮೈದಾನದಲ್ಲಿ RCB ಗೆ ಗೆಲುವು ದೊರೆತಿದೆ. ಇದು ತಂಡಕ್ಕೆ ಮಹತ್ವದ ಸಾಧನೆ.