back to top
25.1 C
Bengaluru
Thursday, October 30, 2025
HomeNewsಭಾರತದಲ್ಲಿ Vivo V50 ಬಿಡುಗಡೆ: ಬಿಗ್ ಬ್ಯಾಟರಿ, ಮೂರು 50MP ಕ್ಯಾಮೆರಾ

ಭಾರತದಲ್ಲಿ Vivo V50 ಬಿಡುಗಡೆ: ಬಿಗ್ ಬ್ಯಾಟರಿ, ಮೂರು 50MP ಕ್ಯಾಮೆರಾ

- Advertisement -
- Advertisement -


ಇಂದು, 2025 ರ ಪ್ರೀಮಿಯಂ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ Vivo V50 ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ ಸ್ಲಿಮ್ ವಿನ್ಯಾಸ, ಜೈಸ್ ಕ್ಯಾಮೆರಾ, ಕ್ವಾಡ್ ಕವರ್ಡ್ ಡಿಸ್ಪ್ಲೇ ಮತ್ತು ದೊಡ್ಡ 6000mAh ಬ್ಯಾಟರಿ ಸೇರಿವೆ.

ವಿವೋ V50 ಡಿಸ್ಪ್ಲೇ : ಈ ಫೋನಿನಲ್ಲಿ 6.78 ಇಂಚಿನ ಮೈಕ್ರೋ Quad Curved ಓಎಲ್ಇಡಿ ಡಿಸ್ಪ್ಲೇ ಆಗಿದ್ದು, 120Hz ರಿಫ್ರೆಶ್ ದರ ಮತ್ತು 2,800 × 1,260 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.

ವಿವೋ V50 5G ಪ್ರೊಸೆಸರ್: Vivo V50 5G ಮೊಬೈಲ್, Qualcomm’s ಸ್ನಾಪ್‌ಡ್ರಾಗನ್ 7 ಜೆನ್ 3 ಪ್ರೊಸೆಸರ್ ಹೊಂದಿದ್ದು, 8GB RAM ಮತ್ತು 12GB RAM ಆಯ್ಕೆಗಳು ಲಭ್ಯವಿವೆ. 128GB ಮತ್ತು 256GB ಸ್ಟೋರೇಜ್ ಆಯ್ಕೆಗಳು ಸಹ ಲಭ್ಯವಿರುತ್ತವೆ.

ಕ್ಯಾಮೆರಾ ಫೀಚರ್ಸ್: Vivo V50 5G ಸ್ಮಾರ್ಟ್‌ಫೋನ್ 50MP OIS ಬೆಂಬಲದ ಪ್ರಮುಖ ಕ್ಯಾಮೆರಾ, 50MP ದ್ವಿತೀಯ ZEISS ಕ್ಯಾಮೆರಾ, ಮತ್ತು 50MP ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್: 6000mAh ಬ್ಯಾಟರಿ ಹಾಗೂ 90W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿರುವ Vivo V50, ದೊಡ್ಡ ಬ್ಯಾಟರಿ ಹೊಂದಿರುವ ತೆಳ್ಳಗಿನ ಸ್ಮಾರ್ಟ್‌ಫೋನ್ ಆಗಿದೆ.

ವಿವೋ V50 5G ವೈಶಿಷ್ಟ್ಯಗಳು: ಇದರಲ್ಲಿರುವ ಎಐ ಫೀಚರ್ಸ್, ಡ್ಯುಯಲ್ 4G VoLTE, 5G, Wi-Fi, GPS, Bluetooth, USB Type-C ಪೋರ್ಟ್ ಸೇರಿದಂತೆ ವಿವಿಧ ಕನೆಕ್ಟಿವಿಟಿ ಆಯ್ಕೆಗಳಿವೆ.

ವಿವೋ V50 ಬೆಲೆ ಮತ್ತು ಲಭ್ಯತೆ: Vivo V50 5G ಫೋನ್ 35,000 ರೂ. ಬೆಲೆಗೆ ಲಭ್ಯವಿರಬಹುದೆಂದು ನಿರೀಕ್ಷಿಸಲಾಗಿದೆ. ಇದು ಫ್ಲಿಪ್ಕಾರ್ಟ್ ಮತ್ತು ವಿವೋ ಅಧಿಕೃತ ಇ-ಸ್ಟೋರ್ ಮೂಲಕ ಖರೀದಿಸಬಹುದಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page