Hyderabad: ವಿವೋ ತನ್ನ ಹೊಸ ವಿ60 (Vivo V60) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ಫೋನ್‌ನಲ್ಲಿ 120Hz ಕ್ವರ್ವ್ಡ್ ಅಮೋಲೆಡ್ ಡಿಸ್ಪ್ಲೇ, ಸ್ನಾಪ್ಡ್ರಾಗನ್ 7 ಜನರೇಷನ್ 4 ಚಿಪ್‌ಸೆಟ್, 16ಜಿಬಿ ವರೆಗೆ RAM ಮತ್ತು 512ಜಿಬಿ ವರೆಗೆ ಸ್ಟೋರೇಜ್ ಇದೆ.
50MP ಟ್ರಿಪಲ್ ಹಿಂಬದಿ ಕ್ಯಾಮೆರಾ, 90ವಾಟ್ಸ್ ಫಾಸ್ಟ್ ಚಾರ್ಜಿಂಗ್ ಮತ್ತು 6,500mAh ಬ್ಯಾಟರಿ ಹೊಂದಿದ್ದು, ಆಂಡ್ರಾಯ್ಡ್ 15 ಆಧಾರಿತ FunTouch OS 15 ಮೇಲೆ ಕಾರ್ಯನಿರ್ವಹಿಸುತ್ತದೆ.
ವಿವೋ ಹೇಳುವ ಪ್ರಕಾರ, ಇದು ಭಾರತದ ಅತ್ಯಂತ ಸ್ಲಿಮ್ 6,500mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ. ಕ್ಯಾಮೆರಾ ವ್ಯವಸ್ಥೆ ಝೈಸ್ ಸಹಯೋಗದಲ್ಲಿ ವಿನ್ಯಾಸಗೊಳಿಸಲಾಗಿದೆ.
ಫೋನ್ IP68 ಮತ್ತು IP69 ನೀರು-ಧೂಳು ನಿರೋಧಕ ಪ್ರಮಾಣಪತ್ರ ಹೊಂದಿದೆ. ಆಶ್ಪಿಯಸ್ ಗೋಲ್ಡ್, ಮೂನ್ಲಿಟ್ ಬ್ಲೂ ಮತ್ತು ಮಿಸ್ಟ್ ಗ್ರೇ ಬಣ್ಣಗಳಲ್ಲಿ ಲಭ್ಯ.
ಬೆಲೆ
- 8GB RAM + 128GB: 36,999
- 8GB RAM + 256GB: 38,999
- 12GB RAM + 256GB: 40,999
- 16GB RAM + 512GB: 45,999
ಮಾರಾಟ ಮತ್ತು ಆಫರ್ಗಳು: ಫೋನ್ ಆಗಸ್ಟ್ 19ರಿಂದ ಮಾರುಕಟ್ಟೆಯಲ್ಲಿ ಲಭ್ಯ. ಅದಕ್ಕೂ ಮೊದಲು ವಿವೋ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ಬುಕಿಂಗ್ ಮಾಡಬಹುದು.
ಬುಕಿಂಗ್‌ನಲ್ಲಿ HDFC ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ 10% ರಿಯಾಯಿತಿ ಅಥವಾ 10% ವಿನಿಮಯ ಬೋನಸ್, 6 ತಿಂಗಳ ಬಡ್ಡಿ ರಹಿತ EMI, 1 ವರ್ಷದ ಉಚಿತ ವಿಸ್ತರಿತ ವಾರಂಟಿ ದೊರೆಯಲಿದೆ.
ಬಂಡಲ್ ಡೀಲ್‌ನಲ್ಲಿ ವಿವೋ TWS (ANC ಜೊತೆಗೆ) ಕೇವಲ ₹1,499ಗೆ ಮತ್ತು V Shield ಮೇಲೆ 40% ರಿಯಾಯಿತಿ ಸಿಗಲಿದೆ.