back to top
20.2 C
Bengaluru
Saturday, July 19, 2025
HomeBusinessಸರ್ಕಾರದಿಂದ Vodafone Idea ನೆರವಿನ ನಿರೀಕ್ಷೆ

ಸರ್ಕಾರದಿಂದ Vodafone Idea ನೆರವಿನ ನಿರೀಕ್ಷೆ

- Advertisement -
- Advertisement -

ವೊಡಾಫೋನ್ ಐಡಿಯಾ (Vodafone Idea) ಸಂಸ್ಥೆ 25,000 ಕೋಟಿ ರೂ ಮೊತ್ತದ ಸಾಲ ಪಡೆಯಲು ಮಾಡಿರುವ ಪ್ರಯತ್ನಗಳು ವಿಫಲವಾಗಿವೆ. AGR ಬಾಕಿ ಹಣದ ಕುರಿತ ಸುಪ್ರೀಂಕೋರ್ಟ್ (Supreme Court) ತೀರ್ಪು, ಬ್ಯಾಂಕುಗಳನ್ನು ಹಣಕಾಸಿನ ನೆರವು ನೀಡುವುದಕ್ಕೆ ಹಿಂದೇಟು ಹಾಕಿಸಿದೆ.

ಈ ನಡುವೆ, ಸರ್ಕಾರವು AGR ಬಾಕಿ ಹಣಕ್ಕೆ ಬದಲಾಗಿ ಈಕ್ವಿಟಿಯನ್ನು ಪಡೆದು ವಿಐಗೆ ನೆರವು ನೀಡುವ ಸಾಧ್ಯತೆಯೂ ಉಂಟಾಗಿದೆ. ವೊಡಾಫೋನ್ ಐಡಿಯಾ ಸಂಸ್ಥೆ 4ಜಿ ಮತ್ತು 5ಜಿ ಆಧುನೀಕರಿಸಲು ಮುಂದಿನ ಮೂರು ವರ್ಷಗಳಲ್ಲಿ 50,000-55,000 ಕೋಟಿ ರೂ ಹೂಡಿಕೆ ಅಗತ್ಯವಿದೆ. ಇದು ನಡೆಸಲು ಅಗತ್ಯವಾದ ಬಂಡವಾಳ ಒದಗಿಸಲು ಸರ್ಕಾರದ ನೆರವಿನ ಅವಶ್ಯಕತೆ ಇದೆ. ಇದನ್ನು ಮಾಡದಿದ್ದರೆ, ಸಂಸ್ಥೆಯ ದಿವಾಳಿತನದ ಅಪಾಯ ಎದುರಾಗಿದೆ.

ವರದಿಗಳ ಪ್ರಕಾರ, ಸರ್ಕಾರ ಎಜಿಆರ್ ಬಾಕಿ ಹಣವನ್ನು ಈಕ್ವಿಟಿಯಾಗಿ ಪರಿವರ್ತಿಸಬಹುದು. ಈಗಾಗಲೇ ವೊಡಾಫೋನ್ ಐಡಿಯಾ ಸಂಸ್ಥೆಯಲ್ಲಿ ಶೇ. 23.15ರಷ್ಟು ಪಾಲು ಸರ್ಕಾರಕ್ಕಿದೆ. ಎಜಿಆರ್ ಬಾಕಿ ಹಣ ಶೇ. 70,320 ಕೋಟಿ ರೂ. ಇದರಲ್ಲಿ 2026ರ ಮಾರ್ಚ್ ಹೊತ್ತಿಗೆ 29,000 ಕೋಟಿ ರೂ ಮತ್ತು 2027ರ ಮಾರ್ಚ್ ಹೊತ್ತಿಗೆ 43,000 ಕೋಟಿ ರೂ ಪಾವತಿಸಬೇಕಾಗಿದೆ.

ಸುಪ್ರೀಂಕೋರ್ಟ್ ತೀರ್ಪು, ಸಹಕಾರದ ಬಿಕ್ಕಟ್ಟು ಹೆಚ್ಚಿಸಿದೆ. ವೊಡಾಫೋನ್ ಐಡಿಯಾ ಸಂಸ್ಥೆಗೆ ಸರ್ಕಾರದಿಂದ ಕೈ ಚಾಚುವ ನಿರ್ಧಾರವೇ ಮುಂದಿನ ದಿನಗಳಲ್ಲಿ ಅದರ ಬದುಕಿಗೆ ದಾರಿ ಕಂಡು ಕೊಡಬಹುದು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page