ಮಹಾರಾಷ್ಟ್ರ ಮತ್ತು ಜಾರ್ಖಂಡ್ (Maharashtra and Jharkhand) ವಿಧಾನಸಭಾ ಚುನಾವಣೆ (assembly election) ಜೊತೆಗೆ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ 15 ವಿಧಾನಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ.
ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಯುಪಿ ಜೊತೆಗೆ ಉತ್ತರಾಖಂಡ್ (ಒಂದು ಸ್ಥಾನ), ಪಂಜಾಬ್ (ನಾಲ್ಕು ಸ್ಥಾನಗಳು) ಮತ್ತು ಕೇರಳ (ಒಂದು ಸ್ಥಾನ)ಗಳಲ್ಲಿ ಉಪಚುನಾವಣೆ ನಡೆಯುತ್ತಿದೆ.
ಜಾರ್ಖಂಡ್‌ನ 81 ಸ್ಥಾನಗಳಲ್ಲಿ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು. ಹಾರಾಷ್ಟ್ರದಲ್ಲಿ ಬಿಜೆಪಿ-ಮಹಾಯುತಿ ಹಾಗೂ ಮಹಾ ವಿಕಾಸ್ ಅಘಾಡಿ ನಡುವೆ ತೀವ್ರ ಪೈಪೋಟಿ ಮುಂದುವರೆದಿದೆ. ಜಾರ್ಖಂಡ್‌ನಲ್ಲಿ ಜೆಎಂಎಂ ಮೈತ್ರಿಕೂಟ ಮತ್ತು NDA ನಡುವೆ ಸ್ಪರ್ಧೆ ನಡೆಯಲಿದ್ದು. 14,218 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ; ನವೆಂಬರ್ 23 ರಂದು ಮತ ಎಣಿಕೆ ಆಗಲಿದೆ.
ಉತ್ತರ ಪ್ರದೇಶ, ಪಂಜಾಬ್, ಕೇರಳ, ಮತ್ತು ಉತ್ತರಾಖಂಡ್‌ನಲ್ಲಿ 15 ಸ್ಥಾನಗಳಿಗೆ ಉಪಚುನಾವಣೆ. ಇದರೊಂದಿಗೆ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ 158 ಪಕ್ಷಗಳು ಕಣದಲ್ಲಿದ್ದು, ಶಿವಸೇನೆ ಮತ್ತು NCP ವಿಭಾಗದಿಂದ ಸ್ಪರ್ಧೆಯ ತೀವ್ರತೆ ಹೆಚ್ಚಾಗಿದೆ. ಜಾರ್ಖಂಡ್‌ನಲ್ಲಿ SC ಮತ್ತು ST ಮೀಸಲು ಸ್ಥಾನಗಳಿಗೆ ಹೆಚ್ಚು ಸ್ಪರ್ಧೆ.
ಈ ಚುನಾವಣೆ ಭಾರತದ ಪ್ರಮುಖ ರಾಜಕೀಯ ಸಮೀಕ್ಷೆಯಾಗಿದ್ದು, ಫಲಿತಾಂಶಗಳು ರಾಷ್ಟ್ರೀಯ ರಾಜಕೀಯದ ಮೇಲೆ ಪರಿಣಾಮ ಬೀರುತ್ತವೆ. ಚುನಾವಣೆ ಫಲಿತಾಂಶವು ರಾಜ್ಯಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.