Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ತಮ್ಮ ಟ್ಯಾರಿಫ್ (ಆಮದು ಸುಂಕ) ನೀತಿಯನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ. ಚೀನಾದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಅವರು, ಶೀಘ್ರದಲ್ಲೇ ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಮೇಲೂ ಶೇ. 25ರಷ್ಟು ಸುಂಕ ಹಾಕುವುದಾಗಿ ಘೋಷಿಸಿದ್ದಾರೆ. ಮುಂದಿನ ಹಂತದಲ್ಲಿ ಭಾರತ ಸೇರಿದಂತೆ ಇತರ ದೇಶಗಳ ಮೇಲೂ “ರಿವೆಂಜ್ ಟ್ಯಾಕ್ಸ್” ಹೇರಲು ಯೋಜನೆ ಇದೆ.
ಪ್ರಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಈ ಕ್ರಮಗಳನ್ನು “ಯುದ್ಧ ಕಾಲದ ನೀತಿ” ಎಂದು ಕರೆದಿದ್ದಾರೆ. “ಟ್ಯಾರಿಫ್ ತೆರಿಗೆಗಳನ್ನು ಯಾರಾದರೂ ಬಂದು ಕಟ್ಟುವುದಿಲ್ಲ. ಮ್ಯಾಜಿಕ್ ದೇವತೆ ಇದನ್ನು ಪಾವತಿಸುವುದಿಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.
ಟ್ರಂಪ್ ಅವರ ಸುಂಕ ನೀತಿಯ ಪರಿಣಾಮವಾಗಿ ಸರಕುಗಳ ಬೆಲೆ ಏರಿಕೆಯಾಗುತ್ತವೆ. ಈ ತೆರಿಗೆಯ ಹೊರೆ ಅಂತಿಮವಾಗಿ ಅಮೆರಿಕದ ಗ್ರಾಹಕರಿಗೇ ಬಿದ್ದು, ಖರೀದಿ ಸಾಮರ್ಥ್ಯ ಕುಗ್ಗುವ ಸಾಧ್ಯತೆ ಇದೆ ಎಂದು ಬಫೆಟ್ ಎಚ್ಚರಿಸಿದ್ದಾರೆ.
“ಸರ್ಕಾರ ಹಣವನ್ನು ಜವಾಬ್ದಾರಿಯುತವಾಗಿ ಬಳಸಬೇಕು” ಎಂದು ಬಫೆಟ್ ಅಮೆರಿಕ ಆಡಳಿತವನ್ನು ಎಚ್ಚರಿಸಿದ್ದಾರೆ. ಅವರ ಬರ್ಕ್‌ಶೈರ್ ಹಥವೇ ಸಂಸ್ಥೆ ಅಮೆರಿಕ ಸರ್ಕಾರಕ್ಕೆ ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಿರುವುದರಿಂದ, ಬಫೆಟ್ ಅವರ ಅಭಿಪ್ರಾಯ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.