Home India ಎಲ್ಲಾ ಮತಗಟ್ಟೆಗಳಲ್ಲಿ Webcasting ಕಡ್ಡಾಯ: Election Commission ದ ಹೊಸ ಮಾರ್ಗಸೂಚಿ

ಎಲ್ಲಾ ಮತಗಟ್ಟೆಗಳಲ್ಲಿ Webcasting ಕಡ್ಡಾಯ: Election Commission ದ ಹೊಸ ಮಾರ್ಗಸೂಚಿ

Webcasting mandatory at all polling stations

ಮತದಾನದ ಮೇಲೆ ಹೆಚ್ಚಿನ ನಿಗಾವಹಿಸುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗ (Election Commission) ಹೊಸ ನಿರ್ಧಾರ ಕೈಗೊಂಡಿದೆ. ಇದರಂತೆ, ದೇಶದ ಎಲ್ಲ ಮತಗಟ್ಟೆಗಳಲ್ಲಿ (Webcasting) ವೆಬ್ಕಾಸ್ಟಿಂಗ್ (live video streaming) ಕಡ್ಡಾಯವಾಗಿದೆ.

ವೆಬ್ಕಾಸ್ಟಿಂಗ್ ಎಂದರೇನು?: ಮತದಾನದ ಗೌಪ್ಯತೆ ಕಾಪಾಡುತ್ತಾ, ಮತಗಟ್ಟೆಯೊಳಗೆ ನಡೆಯುವ ಚಟುವಟಿಕೆಗಳ ನೇರ ದೃಶ್ಯಾವಳಿಯನ್ನು ವೀಕ್ಷಿಸಲು ಇದು ಉಪಯುಕ್ತ. ಇದರ ಮೂಲಕ ಯಾವುದೇ ಅವ್ಯವಸ್ಥೆ ಅಥವಾ ಗೊಂದಲ ಉಂಟಾದರೆ, ದೃಶ್ಯ ದಾಖಲೆ ಮೂಲಕ ಪರಿಶೀಲಿಸಬಹುದು.

  • ಇನ್ನುಮುಂದೆ ಎಲ್ಲ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಕಡ್ಡಾಯ.
  • ಇಂಟರ್ನೆಟ್ ಇಲ್ಲದ ಪ್ರದೇಶಗಳಲ್ಲಿ ವಿಡಿಯೋ ರೆಕಾರ್ಡಿಂಗ್ ಮತ್ತು ಛಾಯಾಗ್ರಹಣ ಮಾಡಬಹುದು.
  • ಈ ಹಿಂದಿನ ನಿಯಮದಲ್ಲಿ ಶೇ. 50ರಷ್ಟು ಮತಗಟ್ಟೆಗಳಿಗೆ ಮಾತ್ರ ವೆಬ್ಕಾಸ್ಟಿಂಗ್ ಇತ್ತು.
  • ಹೊಸ ನಿಯಮವು ಬಿಹಾರ ವಿಧಾನಸಭಾ ಚುನಾವಣೆಯಿಂದ ಜಾರಿಗೆ ಬರುವ ಸಾಧ್ಯತೆ ಇದೆ.
  • ರಾಜ್ಯ, ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ನಿಯಂತ್ರಣ ಕೊಠಡಿ (control room) ಇರುತ್ತದೆ.
  • ಈ ವ್ಯವಸ್ಥೆ ಇಆರ್ಒ (Returning Officer) ಮೂಲಕ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ.
  • ಮತದಾನದ ಸ್ಥಳದಲ್ಲಿ ಗೋಪ್ಯತೆ ಕಾಪಾಡುವ ಬಗ್ಗೆ ಕಟ್ಟುನಿಟ್ಟಾದ ನಿಯಮಗಳು ಇರುವುದರಿಂದ, ಬಲ್ಲೆಟ್ ಯೂನಿಟ್ ಅಥವಾ ವಿವಿಪ್ಯಾಟ್ ಹತ್ತಿರ ವೆಬ್ಕಾಸ್ಟ್ ಮಾಡಲಾಗದು.
  • ಕೇವಲ ಅಧಿಕೃತ ಅಧಿಕಾರಿಗಳಿಗೆ ಮಾತ್ರ ಮೊಬೈಲ್ ಬಳಕೆಗೆ ಅವಕಾಶ.

ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು, ಅನೇಕ ಮತಗಟ್ಟೆಗಳನ್ನು ಒಂದೇ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು, ಹಾಗೂ ಚುನಾವಣೆ ವೇಳೆ ಪ್ರಸ್ತುತ ಅಥವಾ ಭವಿಷ್ಯದಲ್ಲಿ ಉಂಟಾಗಬಹುದಾದ ಯಾವುದೇ ವಿವಾದಗಳಿಗೆ ಸ್ಪಷ್ಟತೆ ನೀಡಲು ಈ ವ್ಯವಸ್ಥೆ ಸಹಾಯಕವಾಗುತ್ತದೆ.

ಈ ಹೊಸ ಮಾರ್ಗಸೂಚಿಗಳು ಮತದಾನದ ಪ್ರಕ್ರಿಯೆಯನ್ನು ಹೆಚ್ಚು ಭದ್ರ, ಪಾರದರ್ಶಕ ಮತ್ತು ವಿಶ್ವಾಸಾರ್ಹವಾಗಿಸಲು ಕ್ರಮಗಳನ್ನು ವಹಿಸುತ್ತವೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version