New Delhi: ಎಂಟನೇ ವೇತನ ಆಯೋಗ ರಚನೆಗೆ (Pay Commission) ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 8ನೇ ವೇತನ ಆಯೋಗ ರಚನೆ ಬಗ್ಗೆ ಕೇಂದ್ರ ಸಚಿವ ಡಾ. ಎ ವೈಷ್ಣವ್ ಮಾಹಿತಿ ನೀಡಿದ್ದಾರೆ. ಈ ಕ್ರಮವು ಸರ್ಕಾರಿ ನೌಕರರ ಒತ್ತಾಯಗಳಿಗೆ ಸಂಬಂಧಿಸಿದೆ.
ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸುಗಳು 2025 ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತವೆ. ಹೊಸ ವೇತನ ಆಯೋಗ 2026 ರ ವೇಳೆಗೆ ಶಿಫಾರಸುಗಳನ್ನು ನೀಡಲು ಸಾಧ್ಯತೆ ಇದೆ.
ಎಂಟನೇ ವೇತನ ಆಯೋಗ ರಚನೆಯಾದರೆ, ನೌಕರರ ವೇತನದಲ್ಲಿ ಸಾಕಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. 7ನೇ ವೇತನ ಆಯೋಗದಲ್ಲಿ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ, ಇದು 2.86ಕ್ಕೆ ಹೆಚ್ಚಿಸಬಹುದು. ಈ ಪರಿವರ್ತನೆಯಿಂದ ಕನಿಷ್ಠ ಸಂಬಳ 18,000 ರೂಪಾಯಿಯಿಂದ 51,480 ರೂಪಾಯಿಗೆ ಹೆಚ್ಚಬಹುದು.
ಇದೇ 8ನೇ ವೇತನ ಆಯೋಗದ ಶಿಫಾರಸುಗಳು ವಿವಿಧ ರಾಜ್ಯ ಸರ್ಕಾರಗಳು ತಮ್ಮ ನೌಕರರ ವೇತನ ಪರಿಷ್ಕರಣೆಗೆ ಬಳಸಿಕೊಳ್ಳಬಹುದು.