MUDA ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಮತ್ತು ಗೋವಿಂದರಾಜು ವಿರುದ್ಧ ವಾಮಾಚಾರ (black magic) ಮಾಡಲಾಗಿದೆ ಎಂಬ ಆರೋಪದ ಮೇಲೆ, ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಅಶೋಕ್ ನಗರ ಸ್ಮಶಾನದಲ್ಲಿರುವ ಕಾಳಿಕಾಂಬ ದೇವಾಲಯದಲ್ಲಿ ಇಬ್ಬರು ಆರೋಪಿಗಳು, ಅರ್ಚಕರಿಗೆ ಮಾಹಿತಿ ನೀಡದೆ, ಕುರಿಗಳನ್ನು ಬಲಿ ನೀಡಿ ವಾಮಾಚಾರ ನಡೆಸಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸ್ನೇಹಮಯಿ ಕೃಷ್ಣ, ಗಂಗರಾಜು, ಪ್ರಸಾದ್ ಅತ್ತಾವರ, ಶ್ರೀನಿಧಿ ಮತ್ತು ಸುಮಾ ಆಚಾರ್ಯರ ಹೆಸರುಗಳಿರುವ ಚೀಟಿಯನ್ನು ಕಾಳಿಕಾಂಬ ದೇವಿಯ ಕೊರಳಿಗೆ ಹಾಕಲಾಗಿತ್ತು. ಕುರಿಗಳ ರಕ್ತವನ್ನು ಸ್ನೇಹಮಯಿ ಮತ್ತು ಗಂಗರಾಜು ಫೋಟೋಗೆ ಅರ್ಪಿಸಲಾಗಿತ್ತು.
ವಾಮಾಚಾರದ ದೃಶ್ಯಗಳು ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರ ಮೊಬೈಲ್‌ನಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.