ಆಂಧ್ರಪ್ರದೇಶ (Andhra Pradesh) ಸರ್ಕಾರವು ಮಹಿಳೆಯರ, ವಿಶೇಷವಾಗಿ ಐಟಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ವರ್ಕ್ ಫ್ರಂ ಹೋಂ (WFH-Work From Home) ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಈ ಯೋಜನೆ ಕುರಿತು ಮಾಹಿತಿ ನೀಡಿದ್ದು, ಕೋವಿಡ್-19 ಸಮಯದಲ್ಲಿ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ ಕಂಡು ಬಂದಿದ್ದು, ತಂತ್ರಜ್ಞಾನದ ಸಹಾಯದಿಂದ ಮನೆಯಿಂದ ಕೆಲಸ ಮಾಡುವ ಆಯ್ಕೆ ಹೆಚ್ಚಿದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ, ಸರ್ಕಾರ ಐಟಿ ಮತ್ತು ಜಿಸಿಸಿ ನೀತಿ 4.0 ಪ್ರಕಾರ, ಪ್ರತಿ ನಗರ, ಪಟ್ಟಣ ಮತ್ತು ಮಂಡಲಗಳಲ್ಲಿ ಐಟಿ ಕಚೇರಿಗಳನ್ನು ಸ್ಥಾಪಿಸಲು ಡೆವಲಪರ್ ಗಳನ್ನು ಪ್ರೋತ್ಸಾಹಿಸುತ್ತಿದೆ. ಇದು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಸಹಾಯ ಮಾಡುತ್ತಿದ್ದು, ಮಹಿಳಾ ವೃತ್ತಿಪರರು, ಹೈಬ್ರಿಡ್ ಅಥವಾ ರಿಮೋಟ್ ಕೆಲಸದ ಆಯ್ಕೆಗಳಿಂದ ಪ್ರಯೋಜನ ಪಡೆಯುವ ಮೂಲಕ ಹೆಚ್ಚು ಭಾಗವಹಿಸಬಹುದು.
ಕೋವಿಡ್-19 ಸಾಂಕ್ರಾಮಿಕದ ನಂತರ, WFH ಜನಪ್ರಿಯ ಆಯ್ಕೆಯಾಗಿದ್ದು, ಇನ್ನೂ ಕೆಲವು ಸಂಸ್ಥೆಗಳು ಹೈಬ್ರಿಡ್ ಮಾದರಿಯನ್ನು ಅನುಸರಿಸುತ್ತಿವೆ. ಈ ಯೋಜನೆಯು ಮಹಿಳೆಯರಿಗೆ ಉತ್ತಮ ಸಂಬಳ ಮತ್ತು ಉತ್ತಮ ಕೆಲಸವನ್ನು ಪಡೆಯಲು ಸಹಾಯ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಚಂದ್ರಬಾಬು ನಾಯ್ಡು ಅವರು ಇತ್ತೀಚೆಗೆ ಈ ಬಗ್ಗೆ ಮಾಡಿದ ಹೇಳಿಕೆಗಳು ಆಂಧ್ರಪ್ರದೇಶದಲ್ಲಿ ಚರ್ಚೆಯನ್ನು ಉಂಟುಮಾಡಿವೆ. ಹೀಗಾಗಿ, ಸರ್ಕಾರವು ಅವಿಭಜಿತ ಆಂಧ್ರ ಪ್ರದೇಶದಲ್ಲಿ ಯಾವುದೇ ಕೆಲಸದಿಂದ ಹೊರಹೋಗಿದ ಅಥವಾ ಕಡಿಮೆ ಸಂಬಳ ಪಡೆಯುತ್ತಿರುವ ಮಹಿಳೆಯರಿಗೆ ಸಹಾಯ ಮಾಡಲು ಪ್ರಾಯೋಗಿಕ ಉದ್ಯೋಗ-ಆಧಾರಿತ ಕೌಶಲ್ಯವನ್ನು ಮನೆ ಬಾಗಿಲಿಗೆ ತರುವ ಯೋಜನೆ ರೂಪಿಸಬೇಕೆಂದು ನಿರ್ಧರಿಸಿದೆ.