ಭಾರತೀಯ ಸ್ಟಾರ್ಟ್ಅಪ್ ಅಲ್ಟ್ರಾವೈಲೆಟ್ ಎಲೆಕ್ಟ್ರಿಕ್ (Ultraviolet X-47 Crossover) ಬೈಕ್ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ. ಕಂಪನಿಯು ರಾಡಾರ್ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಮೊದಲ ಬೈಕ್ X-47 ಕ್ರಾಸ್ಒವರ್ ಅನ್ನು ಪರಿಚಯಿಸಿದೆ. ಈ ಬೈಕ್ ನಗರದ ರಸ್ತೆಗಳಲ್ಲಿ ಮಾತ್ರವಲ್ಲದೆ ಕಷ್ಟಕರ ಸ್ಥಳಗಳಲ್ಲಿಯೂ ಸುಲಭವಾಗಿ ಸಂಚರಿಸಬಹುದು.
ಬೆಲೆ ಮತ್ತು ಲಭ್ಯತೆ: ಈ ಬೈಕ್ ಆರಂಭಿಕವಾಗಿ ರೂ. 2,49,000 ರಲ್ಲಿ ಲಭ್ಯವಿದ್ದು, ಮೊದಲ 1000 ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ನಂತರ ಬೆಲೆ ರೂ. 2,74,000 ವರೆಗೆ ಏರಬಹುದು. ಬುಕ್ಕಿಂಗ್ ಈಗಾಗಲೇ ಅಲ್ಟ್ರಾವೈಲೆಟ್ website ನಲ್ಲಿ ರೂ. 999 ಕ್ಕೆ ಆರಂಭವಾಗಿದೆ. ಡೆಲಿವರಿ ಅಕ್ಟೋಬರ್ 2025 ರಿಂದ ಪ್ರಾರಂಭವಾಗಲಿದೆ.
ಡಿಸೈನ್ ಮತ್ತು ಪರ್ಫಾರ್ಮೆನ್ಸ್: X-47 ಬೈಕ್ ವಿನ್ಯಾಸವು ಫೈಟರ್ ಜೆಟ್‌ಗಳಿಂದ ಪ್ರೇರಿತವಾಗಿದೆ. 10.3 kWh ಬ್ಯಾಟರಿ ಪ್ಯಾಕ್ ಹೊಂದಿರುವ ಈ ಬೈಕ್ ಸಿಂಗಲ್ ಚಾರ್ಜ್ ನಲ್ಲಿ 323 ಕಿಲೋಮೀಟರ್ ಪ್ರಯಾಣ ಮಾಡಬಹುದು. 40 hp ಪವರ್ ಮತ್ತು 610 Nm ಟಾರ್ಕ್ ಉತ್ಪಾದಿಸುವ ಈ ಬೈಕ್ ಕೇವಲ 2.7 ಸೆಕೆಂಡುಗಳಲ್ಲಿ 0 ರಿಂದ 60 ಕಿಮೀ/ಗಂಟೆಗೆ ತಲುಪಬಹುದು. ಗರಿಷ್ಠ ವೇಗ 145 ಕಿಮೀ/ಗಂಟೆ.
ಸುರಕ್ಷತೆಯಲ್ಲಿ ಹೊಸ ಮಾನದಂಡ: UV ಹೈಪರ್ಸೆನ್ಸ್ ಸಿಸ್ಟಮ್ 77 GHz ರಿಯರ್ ರಾಡಾರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು 200 ಮೀಟರ್ ದೂರವರೆಗೆ ಮೇಲ್ವಿಚಾರಣೆ ಮಾಡುತ್ತದೆ. ಇದು ನಾಲ್ಕು ಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.
- ಬ್ಲೈಂಡ್-ಸ್ಪಾಟ್ ಮಾನಿಟರಿಂಗ್
- ಲೇನ್ ಬದಲಾವಣೆ ಸಹಾಯ
- ಓವರ್ಟೇಕ್ ಅಲರ್ಟ್
- ರೇರ್ ಕೊಲಿಜನ್ ಅಲರ್ಟ್
ಇತರ ಪ್ರಮುಖ ವೈಶಿಷ್ಟ್ಯಗಳು: X-47 ಬೈಕ್ DC ಫಾಸ್ಟ್ ಮತ್ತು AC ಕಾರ್ ಚಾರ್ಜಿಂಗ್ ಎರಡನ್ನೂ ಬೆಂಬಲಿಸುತ್ತದೆ. ಮುಂಭಾಗ ಮತ್ತು ಹಿಂಭಾಗದಲ್ಲಿ 1080p ಡ್ಯಾಶ್ಕ್ಯಾಮ್ ಕ್ಯಾಮೆರಾಗಳನ್ನು ಹೊಂದಿದೆ. 41 mm ಇನ್ವರ್ಟಡ್ ಫ್ರಂಟ್ ಫೋರ್ಕ್ಸ್, ರೇರ್ ಮೊನೊ-ಶಾಕ್ ಸಸ್ಪೆನ್ಷನ್ ಮತ್ತು 10ನೇ ತಲೆಮಾರಿನ BOSCH ಡ್ಯುಯಲ್-ಚಾನೆಲ್ ABS ಸಿಸ್ಟಮ್ ಇದರಲ್ಲಿ ಸೇರಿಸಲಾಗಿದೆ.
ರೈಡಿಂಗ್ ಮೋಡ್ ಗಳು: ರೈಡರ್ ತಮ್ಮ ಅಗತ್ಯಕ್ಕೆ ತಕ್ಕಂತೆ ಮೂರು ಮೋಡ್ಗಳಲ್ಲಿ ಆಯ್ಕೆ ಮಾಡಬಹುದು: ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್. ಈ ಬೈಕ್ ಶಕ್ತಿ, ಕಾರ್ಯಕ್ಷಮತೆ ಮತ್ತು ಸುರಕ್ಷತೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ.







