back to top
26.3 C
Bengaluru
Friday, July 18, 2025
HomeIndiaJammu and Kashmir ದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ: PM Modi

Jammu and Kashmir ದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ: PM Modi

- Advertisement -
- Advertisement -

Riyas (Jammu and Kashmir): ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅಧಿಕೃತವಾಗಿ ಉದ್ಘಾಟಿಸಿದರು. ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ಭಾಗವಾದ ಈ ಸೇತುವೆ ಮೇಲೆ ಪ್ರಧಾನಿಯ ಚಾಲನೆ ನೀಡಿದರೆ, ರೈಲು ಸೇತುವೆಯ ಡೆಕ್ ಮೇಲೆ ಸುರಕ್ಷಿತವಾಗಿ ಸಾಗಿತು.

ಕಾರ್ಯಕ್ರಮದಲ್ಲಿ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.

ಉದ್ಘಾಟನೆಯ ಮೊದಲು ಪ್ರಧಾನಿಯವರು ಸೇತುವೆಯ ಪರಿಶೀಲನೆ ಮಾಡಿ, ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕವು ಕಠಿಣ ಭೂಮಿತಿಗೆ ಮತ್ತು ಭೂಕಂಪನ ಪರಿಸ್ಥಿತಿಗೆ ಅನುಗುಣವಾಗಿ ನಿರ್ಮಿಸಲಾದ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆ ಸುಮಾರು 43,780 ಕೋಟಿ ರೂ. ವೆಚ್ಚದಲ್ಲಿ 272 ಕಿಲೋಮೀಟರ್ ಉದ್ದದಿದ್ದು, 36 ಸುರಂಗ ಮತ್ತು 943 ಸೇತುವೆಗಳನ್ನು ಒಳಗೊಂಡಿದೆ.

ಶ್ರೀ ಮಾತಾ ವೈಷ್ಣೋವಿ ದೇವಿ ಕತ್ರಾ ನಿಂದ ಶ್ರೀನಗರಕ್ಕೆ ಎರಡು ವಂದೇ ಭಾರತ್ ರೈಲಿಗೆ ಕೂಡ ಮೋದಿ ಚಾಲನೆ ನೀಡಿದರು.

ಈ ಸೇತುವೆ ಹಾಗೂ ರೈಲು ಸಂಪರ್ಕ ಯೋಜನೆ ಭಾರತದಲ್ಲಿ ತಾಂತ್ರಿಕ ನಿಪುಣತೆ ಮತ್ತು ಅಭಿವೃದ್ಧಿಯ ದೊಡ್ಡ ಸಾಧನೆಯಾಗಿದೆ ಮತ್ತು ಎಲ್ಲಾ ಹವಾಮಾನದಲ್ಲಿ ನಿರಂತರ ಸೇವೆ ನೀಡಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page