ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಮುಂಬೈ ಇಂಡಿಯನ್ಸ್ (MI) ತಂಡ ಕೊನೆಯ ಓವರ್ ಗಳಲ್ಲಿ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಈ ಗುರಿಯನ್ನು ಮುಂಬೈ ತಂಡ 19.5 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಹೊಡೆದು, ಒಂದು ಎಸೆತ ಬಾಕಿ ಇರುವಾಗಲೇ ಗೆಲುವು ಸಾಧಿಸಿತು.
ಹರ್ಮನ್ ಪ್ರೀತ್ ಕೌರ್ ಹಾಗೂ ಅಮನ್ಜೋತ್ ಸ್ಫೋಟಕ ಆಟವಾಡಿ ಮುಂಬೈಗೆ ಜಯ ತಂದುಕೊಟ್ಟರು. ಹಾಲಿ ಟೂರ್ನಿಯಲ್ಲಿ ಇದು ಮುಂಬೈಗೆ 2ನೇ ಗೆಲುವು, ಆದರೆ RCBಗೆ ಮೊದಲ ಸೋಲು.
9 ರನ್ ಆಗುವಷ್ಟರಲ್ಲೇ ಮುಂಬೈ ತಂಡ ತನ್ನ ಮೊದಲ ವಿಕೆಟ್ ಕಳೆದುಕೊಂಡರೂ, ಹೇಲಿ ಮ್ಯಾಥ್ಯೂಸ್ ಹಾಗೂ ನಾಟ್ ಸೀವರ್ ಬ್ರಂಟ್ ಒಟ್ಟಿಗೆ 57 ರನ್ ಜೊತೆಯಾಟ ನೀಡಿದರು. ಸೀವರ್ ಬ್ರಂಟ್ ಕೇವಲ 21 ಎಸೆತಗಳಲ್ಲಿ 42 ರನ್ ಬಾರಿಸಿದರು.ಈ ಗೆಲುವಿನೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.