Uttar Pradesh : ರಾಜ್ಯದ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉತ್ತರ ಪ್ರದೇಶ ಸರ್ಕಾರ ಉದ್ಯೋಗಾವಕಾಶ ನೀಡಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬುಧವಾರ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರದ ವತಿಯಿಂದ ಸ್ಕಿಲ್ ಮ್ಯಾಪಿಂಗ್ (skill mapping) ಪ್ರಯೋಗವನ್ನ ಕೂಡ ಆರಂಭಿಸಲಾಗಿದೆ ಎಂದು ಗೋರಕಪುರದಲ್ಲಿ ಅವರು ತಿಳಿಸಿದ್ದಾರೆ.
ಸ್ಕಿಲ್ ಮ್ಯಾಪಿಂಗ್ ಮೂಲಕ ಯಾರೊಬ್ಬರೂ ಉದ್ಯೋಗದಲ್ಲಿ ಇರದ ಕುಟುಂಬಗಳನ್ನು ಹುಡುಕಿ ಅಂತಹ ಕುಟುಂಬಗಳ ಸದಸ್ಯರನ್ನ ವಿಶೇಷ ಕಾರ್ಯಕ್ರಮದ ಮೂಲಕ ಸಂಪರ್ಕಿಸಿ ಉದ್ಯೋಗಾವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ಈ ಸ್ಕಿಲ್ ಮ್ಯಾಪಿಂಗ್ ಸೂತ್ರದಿಂದ ಯಾವುದೇ ಉದ್ಯೋಗಿಗಳಿಲ್ಲದ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಆದಿತ್ಯನಾಥ್ ವಿವರಿಸಿದ್ದಾರೆ.