Bengaluru : ಮೊಹಮ್ಮದ್ ನಲಪಾಡ್ (Mohammed Haris Nalapad) ಸೋಮವಾರ Karnataka Youth Congress ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಯುವ ಕಾಂಗ್ರೆಸ್ ಸಮಿತಿ ಚುನಾವಣೆಯಲ್ಲಿ ನಲಪಾಡ್ ಗೆಲುವು ಸಾಧಿಸಿದ್ದರೂ ಅವರನ್ನು ಅನರ್ಹಗೊಳಿಸಿ ಎರಡನೇ ಸ್ಥಾನದಲ್ಲಿದ್ದ ರಕ್ಷಾ ರಾಮಯ್ಯ (Raksha Ramaiah) ಅವರಿಗೆ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ನಂತರ ಇಬ್ಬರ ನಡುವೆ ಸಂಧಾನ ನಡೆಸಿ, ಅಧಿಕಾರದ ಅವಧಿ ಹಂಚಿಕೆ ಮಾಡಲಾಗಿತ್ತು. ರಕ್ಷಾ ರಾಮಯ್ಯ ಅವಧಿ ಅಂತ್ಯಗೊಂಡಿದ್ದು, ನಲಪಾಡ್ ಯುವ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು.
ಫೆಬ್ರವರಿ 10 ರಂದು ಮೊಹಮ್ಮದ್ ನಲಪಾಡ್ ಅವರ ಪದಗ್ರಹಣ ಸಮಾರಂಭ ನಡೆಯಲಿದ್ದು ಸೋಮವಾರದಿಂದಲೇ ಅಧಿಕಾರ ಸ್ವೀಕರಿಸುವಂತೆ ಕಾಂಗ್ರೆಸ್ ವರಿಷ್ಠರು ನಿರ್ದೇಶನ ನೀಡಿದ್ದರು. ಹೀಗಾಗಿ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಸುವ ಮೂಲಕ ಪೂಜೆ ಸಲ್ಲಿಸಿ ಕಚೇರಿ ಪ್ರವೇಶಿಸಿದರು.
ಮೊಹಮ್ಮದ್ ನಲಪಾಡ್ ಅವರ ತಂದೆ ಶಾಸಕ ಎನ್.ಎ. ಹ್ಯಾರಿಸ್ ಮತ್ತು KPCC ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಬ್ಬಾರ್ ಉಪಸ್ಥಿತರಿದ್ದರು.