Washington: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Ukrainian President Volodymyr Zelensky) ಶಾಂತಿ ಬಯಸುವುದಿಲ್ಲ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಆರೋಪಿಸಿದ್ದಾರೆ. ಶುಕ್ರವಾರ ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವೆ ವಾಗ್ಯುದ್ಧ ನಡೆದಿದೆ.
ಈ ಸಭೆಯ ಉದ್ದೇಶ ಯುಎಸ್-ಉಕ್ರೇನ್ ಖನಿಜ ಒಪ್ಪಂದಕ್ಕೆ ಸಹಿ ಹಾಕುವುದಾಗಿತ್ತು. ಆದರೆ, ಝೆಲೆನ್ಸ್ಕಿ ರಷ್ಯಾದೊಂದಿಗೆ ಟ್ರಂಪ್ ಸಂಬಂಧ ಬೆಳೆಸುತ್ತಿರುವ ಬಗ್ಗೆ ಪ್ರಶ್ನಿಸಿ, ಪುಟಿನ್ ಭರವಸೆಗಳನ್ನು ನಂಬಬೇಡಿ ಎಂದು ಎಚ್ಚರಿಸಿದರು. ಈ ವಿಚಾರ ಗಂಭೀರ ವಿವಾದಕ್ಕೆ ಕಾರಣವಾಯಿತು.
ಟ್ರಂಪ್ ಈ ಭಿನ್ನಾಭಿಪ್ರಾಯದ ಬಳಿಕ ಸಭೆಯನ್ನು ಬೇಗನೆ ಮುಕ್ತಾಯಗೊಳಿಸಿ, ಝೆಲೆನ್ಸ್ಕಿಯನ್ನು ಶ್ವೇತಭವನವನ್ನು ತೊರೆಯುವಂತೆ ಹೇಳಿದರು. ಅವರು ಅಮೆರಿಕವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಟ್ರಂಪ್, ಶಾಂತಿಗೆ ಸಿದ್ಧರಾದಾಗ ಮಾತ್ರ ಹಿಂತಿರುಗಬಹುದು ಎಂದು ಹೇಳಿದರು.
ಝೆಲೆನ್ಸ್ಕಿ ಅಮೆರಿಕದಲ್ಲಿ ತಮ್ಮ ಇತರ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮಾಹಿತಿ ಲಭ್ಯವಾಗಿದೆ. ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಝೆಲೆನ್ಸ್ಕಿ ಟ್ರಂಪ್ ಅವರನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದ್ದಾರೆ. ಇದಾದ ನಂತರ, ಟ್ರಂಪ್, ಝೆಲೆನ್ಸ್ಕಿ ಮೂರನೇ ಮಹಾಯುದ್ಧದೊಂದಿಗೆ ಆಟವಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪತ್ರಕರ್ತರೊಬ್ಬರು, “ರಷ್ಯಾ ಕದನ ವಿರಾಮವನ್ನು ಮುರಿದರೆ ಏನಾಗುತ್ತದೆ?” ಎಂದು ಪ್ರಶ್ನಿಸಿದಾಗ, ಟ್ರಂಪ್, “ಯಾರಾದರೂ ನಿಮ್ಮ ತಲೆಯ ಮೇಲೆ ಬಾಂಬ್ ಸ್ಫೋಟಿಸಿದರೆ ಏನಾಗುತ್ತದೆ?” ಎಂದು ಪ್ರತಿಕ್ರಿಯಿಸಿದರು. ಈ ವಾಕ್ಸಮರದಲ್ಲಿ, ಟ್ರಂಪ್ ಝೆಲೆನ್ಸ್ಕಿಗೆ ಬಹಿರಂಗ ಬೆದರಿಕೆ ಹಾಕಿದಂತೆ ಕಾಣುತ್ತಿದೆ.
“ನಿಮ್ಮ ಕೆಟ್ಟ ದಿನಗಳು ಇಂದಿನಿಂದ ಪ್ರಾರಂಭವಾಗುತ್ತವೆ,” ಎಂದು ಟ್ರಂಪ್ ಹೇಳಿದ್ದು, ಉಕ್ರೇನ್ ಈಗ ಅಪಾಯದಲ್ಲಿ ಇದೆ ಎಂದು ಎಚ್ಚರಿಸಿದ್ದಾರೆ.