ಜಿಂಬಾಬ್ವೆ (Zimbabwe) ಅಂತಾರಾಷ್ಟ್ರೀಯ T20ಯಲ್ಲಿ 344 ರನ್ ಗಳಿಸಿ ನೂತನ ದಾಖಲೆಯನ್ನು (Zimbabwe World Record) ನಿರ್ಮಿಸಿದ್ದಾರೆ.
ಅಲ್ಲದೆ, ಈ ಸ್ವರೂಪದಲ್ಲಿ ಗರಿಷ್ಠ ಸ್ಕೋರ್ ಮಾಡಿದ ಪೂರ್ಣ ಸದಸ್ಯ ತಂಡವಾಗಿದೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧ 297 ರನ್ ಗಳಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲಿ ಗರಿಷ್ಠ ಮೊತ್ತದ ದಾಖಲೆ ಇತ್ತು.
ಈ ಸ್ಫೋಟಕ ಪ್ರದರ್ಶನದ ನಂತರ ಜಿಂಬಾಬ್ವೆ 7 ದಾಖಲೆಗಳನ್ನು ಮುರಿದಿದೆ, ಅದರಲ್ಲಿ 2 ಟೀಂ ಇಂಡಿಯಾದ ದಾಖಲೆಯಾಗಿದೆ. ಜಿಂಬಾಬ್ವೆ ಈ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ತಂಡವಾಗಿ ಹಲವು ದೊಡ್ಡ ದಾಖಲೆಗಳನ್ನು ಮುರಿದಿದೆ.
ಜಿಂಬಾಬ್ವೆಯ ಈ ಗೆಲುವಿನಲ್ಲಿ ಸಿಕಂದರ್ ರಾಝಾ ಶತಕದ ಬಿರುಗಾಳಿ ಎಬ್ಬಿಸಿದರು. ಟಿ20 ಪಂದ್ಯವನ್ನು ಅತಿ ಹೆಚ್ಚು ಅಂತರದಿಂದ ಗೆದ್ದ ತಂಡ ಎಂಬ ಹೆಗ್ಗಳಿಕೆಗೂ ಜಿಂಬಾಬ್ವೆ ಪಾತ್ರವಾಗಿದೆ.
ಜಿಂಬಾಬ್ವೆ ಅಂತಾರಾಷ್ಟ್ರೀಯ ಟಿ20ಯಲ್ಲಿ 344 ರನ್ ಗಳಿಸಿತು ಮತ್ತು ಈ ಸ್ವರೂಪದಲ್ಲಿ ಗರಿಷ್ಠ ಸ್ಕೋರ್ ಮಾಡಿದ ಪೂರ್ಣ ಸದಸ್ಯ ತಂಡವಾಗಿದೆ.
ಈ ಹಿಂದೆ ಬಾಂಗ್ಲಾದೇಶ ವಿರುದ್ಧ 297 ರನ್ ಗಳಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲಿ ಈ ದಾಖಲೆ ಇತ್ತು. ಜಿಂಬಾಬ್ವೆ ಕೇವಲ ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ 344 ರನ್‌ಗಳಲ್ಲಿ 282 ರನ್ ಗಳಿಸಿತು. ಇದು ವಿಶ್ವದಾಖಲೆಯಾಗಿದೆ.
ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಬೌಂಡರಿಗಳ ನೆರವಿನಿಂದ 232 ರನ್ ಗಳಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲಿ ಈ ದಾಖಲೆ ಇತ್ತು.
ಜಿಂಬಾಬ್ವೆ ಕೇವಲ 12.5 ಓವರ್ಗಳಲ್ಲಿ ಗ್ಯಾಂಬಿಯಾ ವಿರುದ್ಧ 200 ರನ್ ಪೂರೈಸಿತು. ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 200 ರನ್ ಗಳಿಸಿದ ತಂಡವಾಗಿದೆ. ಈ ಹಿಂದೆ 13.5 ಓವರ್ಗಳಲ್ಲಿ ಈ ಕೆಲಸ ದಕ್ಷಿಣ ಆಫ್ರಿಕಾ ಮಾಡಿತ್ತು.
ಜಿಂಬಾಬ್ವೆ ತಂಡ ಗ್ಯಾಂಬಿಯಾ ವಿರುದ್ಧ 290 ರನ್‌ಗಳಿಂದ ಜಯಗಳಿಸಿದ್ದು, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಗೆಲುವಾಗಿದೆ.
ಬಾಬ್ವೆಯ ಈ ಗೆಲುವಿನಲ್ಲಿ ಸಿಕಂದರ್ ರಾಝ 33 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಅವರು ಪೂರ್ಣ ರಾಷ್ಟ್ರ ತಂಡದ ಪರ ವೇಗದ ಶತಕ ಎನಿಸಿಕೊಂಡಿದೆ. 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ದಾಖಲೆಯೂ ಮುರಿದರು.