back to top
24.5 C
Bengaluru
Saturday, January 18, 2025
HomeKarnatakaBelagaviರಾಣಿ ಚನ್ನಮ್ಮ ವಿ.ವಿ ಕ್ಯಾಂಪಸ್‌ಗೆ ಸಿ.ಎಂ. ಬಸವರಾಜ ಬೊಮ್ಮಾಯಿ ಭೂಮಿಪೂಜೆ

ರಾಣಿ ಚನ್ನಮ್ಮ ವಿ.ವಿ ಕ್ಯಾಂಪಸ್‌ಗೆ ಸಿ.ಎಂ. ಬಸವರಾಜ ಬೊಮ್ಮಾಯಿ ಭೂಮಿಪೂಜೆ

- Advertisement -
- Advertisement -

Belagavi : ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನಗುಡ್ಡದಲ್ಲಿ ಸಿ.ಎಂ. ಬಸವರಾಜ ಬೊಮ್ಮಾಯಿ (Karnataka Chief Minister Sri Basavaraj S Bommai) ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ (Rani Channamma University, Belagavi) ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆ, ಶಿಲಾನ್ಯಾಸ ಮತ್ತು ಸಂಗೊಳ್ಳಿರಾಯಣ್ಣ ಪ್ರಥಮ ದರ್ಜೆ ಘಟಕ (Sangolli Rayanna First Grade College block) ಮಹಾವಿದ್ಯಾಲಯದ 2ನೇ ಹಂತದ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ” ಚನ್ನಮ್ಮನ ಹೆಸರಿನಲ್ಲಿರುವ ಈವಿಶ್ವ ವಿದ್ಯಾನಿಲಯ ನನ್ನ ಹೃದಯಕ್ಕೆ ಹತ್ತಿರವಾದುದು. ವರ್ಷ ದೊಳಗೆ ಕ್ಯಾಂಪಸ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇದು ಜ್ಞಾನ ಇದ್ದವರ ಶತಮಾನ, ಆದ್ದರಿಂದ ಅಲ್ಲಿರುವವರಿಗೆ ವಿ.ವಿ.ಗಳನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಬದ್ಧತೆ ಇರಬೇಕು. . ವಿ.ವಿ.ಗಳು ಕೇವಲ ಪ್ರಮಾಣಪತ್ರ ಕೊಡುವ ಕೆಲಸವನ್ನಷ್ಟೆ ಮಾಡದೆ ವಿಭಿನ್ನವಾಗಿ ಕೆಲಸ ಮಾಡುವ ಧೈರ್ಯ ತೆಗೆದುಕೊಳ್ಳಬೇಕು.‌ ಇದರೊಂದಿಗೆ, ಸಾಮಾಜಿಕವಾಗಿ ಚಿಂತನೆ ಮಾಡುವ ಕೆಲಸವನ್ನೂ ನಿರ್ವಹಿಸಬೇಕು. ರಾಣಿ ಚನ್ನಮ್ಮ ವಿಶ್ವ ವಿದ್ಯಾನಿಲಯ ( RCU ) ಆದರ್ಶವಾಗಿ ರೂಪುಗೊಳ್ಳಲಿ” ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ ಅಶ್ವತ್ಥನಾರಾಯಣ (Dr. Ashwathnarayan C. N.) ಮಾತನಾಡಿ ” ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ‌ ಜಿಲ್ಲೆಗೆ ಗುಣಮಟ್ಟದ ‌ಶಿಕ್ಷಣ ಕೊಡುವುದಕ್ಕಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸ್ವಂತ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ. ವಿ.ವಿ.ಗಳಲ್ಲಿ ಡಿಜಿಟಲ್‌ ಕಲಿಕೆ ಯೋಜನೆ ತರಲಾಗಿದ್ದು ಸಮಗ್ರ‌‌ ಕಲಿಕಾ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ಯಾವ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲೂ ಈ ರೀತಿಯ ಸುಧಾರಣೆ ಮಾಡಿಲ್ಲ’ ಎಂದರು.

ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar), ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ (Shashikala Jolle), ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ (Prof. M. Ramachandra Gowda) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page