ಯುಲೆಫೋನ್ ಕಂಪನಿಯು 22,500mAh ಸಾಮರ್ಥ್ಯದ ಭಾರಿ ಬ್ಯಾಟರಿಯೊಂದಿಗೆ ಹೊಸ ಆರ್ಮರ್ 33 (Ulefone Armor 33) ಮತ್ತು ಆರ್ಮರ್ 33 ಪ್ರೊ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಈ ಫೋನ್ ಗಳು ಒಂದೇ ಚಾರ್ಜ್‌ನಲ್ಲಿ 10 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ.
- ಡಿಸ್ಪ್ಲೇ ವೈಶಿಷ್ಟ್ಯತೆ
- ಎರಡೂ ಫೋನ್ ಗಳು 6.95 ಇಂಚು ಫುಲ್ HD+ ಡಿಸ್ಪ್ಲೇ ಹೊಂದಿವೆ
- 120Hz ರಿಫ್ರೆಶ್ ರೇಟ್, 700 ನಿಟ್ಸ್ brightness
- ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ
- ಹೆಚ್ಚುವರಿ ಪರದೆಗಳು
- ಪ್ರೊ ಮಾದರಿಯು ಹಿಂಭಾಗದಲ್ಲಿ 3.4-ಇಂಚಿನ IPS ಡಿಸ್ಪ್ಲೇ ಹೊಂದಿದೆ
- ಬೇಸ್ ಮಾದರಿಯು LED ಲೈಟ್ ಹೊಂದಿದ್ದು ತುರ್ತು ಪರಿಸ್ಥಿತಿಗೆ ಉಪಯುಕ್ತ
- ಕಾರ್ಯಕ್ಷಮತೆ
- ಆರ್ಮರ್ 33: MediaTek Helio 100 ಚಿಪ್ಸೆಟ್, 12GB RAM
- ಆರ್ಮರ್ 33 ಪ್ರೊ: Dimensity 7300X ಚಿಪ್ಸೆಟ್, 16GB RAM
- ಎರಡೂ ಫೋನ್ ಗಳಲ್ಲೂ 512GB ಸ್ಟೋರೇಜ್, Android 14
- ಬಾಳಿಕೆ ಮತ್ತು ರಕ್ಷಣಾ ಲಕ್ಷಣಗಳು
- ಧೂಳು, ನೀರಿನಿಂದ ರಕ್ಷಣೆಗಾಗಿ IP68/IP69K ರೇಟಿಂಗ್
- MIL-STD-810H ಮಿಲಿಟರಿ ಪ್ರಮಾಣಿತ ಬಾಳಿಕೆ
- 118dB ಸ್ಪೀಕರ್, RGB ಲೈಟಿಂಗ್, ಫಿಂಗರ್‌ಪ್ರಿಂಟ್ ಸೆನ್ಸರ್
- ಕ್ಯಾಮೆರಾ ವಿಭಾಗ
- ಹಿಂಭಾಗದಲ್ಲಿ 50MP ಮುಖ್ಯ, 64MP ನೈಟ್, 50MP ಅಲ್ಟ್ರಾವೈಡ್ ಕ್ಯಾಮೆರಾ
- ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ
- ಚಾರ್ಜಿಂಗ್ ಮತ್ತು ಸಂಪರ್ಕ
- 66W ಫಾಸ್ಟ್ ಚಾರ್ಜ್, 10W ರಿವರ್ಸ್ ಚಾರ್ಜ್
- ಆರ್ಮರ್ 33 ಪ್ರೊ: 5G ಬೆಂಬಲ; ಆರ್ಮರ್ 33: 4G ಬೆಂಬಲ
- ಲಭ್ಯತೆ ಮತ್ತು ರಿಯಾಯಿತಿ
- ಆಗಸ್ಟ್ 18ರಿಂದ ಆಯ್ದ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯ
- ಅಧಿಕೃತ ವೆಬ್‌ಸೈಟ್ ಮತ್ತು ಅಲಿಎಕ್ಸ್‌ಪ್ರೆಸ್‌ನಲ್ಲಿ ಶೇ.50 ರಿಯಾಯಿತಿ
ಜಂಗಲ್ ಟ್ರೆಕ್ಕಿಂಗ್, ಕ್ಯಾಂಪಿಂಗ್, ದೂರ ಪ್ರಯಾಣ ಮಾಡುವವರು, ಹೆಚ್ಚು ಬ್ಯಾಟರಿ ಬೇಕಾದವರಿಗೆ, ದೃಢವಾದ, ವಿಶ್ವಾಸಾರ್ಹ ಫೋನ್ ಬಯಸುವವರಿಗೆ ಉತ್ತಮ ಆಯ್ಕೆ